ಬೆಂಗಳೂರು : ಇಂದು ಫ್ರೀಡಂ ಪಾರ್ಕ್‌ನಲ್ಲಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ವೇಳೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ತಲೆಗೆ ಸಿಎಂ ಸಿದ್ದರಾಮಯ್ಯ ಅವರು ಟವೆಲ್‌ನಲ್ಲಿ ಪೇಟ ಸುತ್ತಿದ್ದಾರೆ.
ಹೆಗಲ ಮೇಲೆ ಇದ್ದ ಟವೆಲ್‌ನ್ನು ಮೊದಲು ಸಿಎಂ ಸಿದ್ದರಾಮಯ್ಯ ಅವರು ತಲೆಗೆ ಕಟ್ಟಿಕೊಂಡರು. ಅದನ್ನು ಸುರ್ಜೇವಾಲ ಅವರು ಸಹ ತಲೆಗೆ ಟವೆಲ್ ಸುತ್ತಿಕೊಂಡರು. ಬಳಿಕ ಭಾಷಣ ಮುಗಿಸಿ ಬಂದ ಡಿಕೆಶಿ ಅವರ ತಲೆಗೆ ಸುರ್ಜೇವಾಲ ಅವರು ಟವೆಲ್ ಸುತ್ತಿದರು. ಅದು ಸರಿಯಾಗದ ಕಾರಣ ಸಿಎಂ ಸಿದ್ದರಾಮಯ್ಯ ಅವರು ನಗು ನಗುತ್ತಲೆ ಸರಿಯಾಗಿ ಡಿಸಿಎಂ ತಲೆಗೆ ಟವೆಲ್ ಸುತ್ತಿದರು. ತಲೆಗೆ ಟವೆಲ್ ಕಟ್ಟಿಕೊಂಡು ಎದ್ದು ಮೂವರು ನಾಯಕರು ಪೋಸ್ ನೀಡಿದರು.
ಪ್ರತಿಭಟನೆ ಬಳಿಕ ಕಾಂಗ್ರೆಸ್ ನಾಯಕರು ಲೋಕಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಈ ಹಿನ್ನೆಲೆ ಲೋಕ ಭವನದ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನೂ 26 ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲರನ್ನು ಭೇಟಿಯಾಗಲು ಅವಕಾಶ ನೀಡಲಾಗಿದೆ. ಫ್ರೀಡಂ ಪಾರ್ಕ್ ನಿಂದ ಕಾಂಗ್ರೆಸ್ ನಾಯಕರನ್ನು ಕರೆದೊಯ್ಯಲು ಬಿಎಂಟಿಸಿ ಬಸ್ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.














