ಬೆಂಗಳೂರು: ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ಧರಾಮಯ್ಯ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸ್ಪಂದನಾ ಅವರ ತಂದೆ ಬಿ.ಕೆ.ಶಿವರಾಂ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಸಿದ್ಧರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿ ವಿಜಯರಾಘವೇಂದ್ರ ಅವರಿಗೆ ಧೈರ್ಯ ತುಂಬಿದರು.
ಇನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಭೇಟಿ ನೀಡಿ ಸ್ಪಂದನಾ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಒಂದು ವಾರದ ಹಿಂದಷ್ಟೇ ದಂಪತಿ ಬಂದು ಭೇಟಿಯಾಗಿದ್ದರು. ಸ್ಪಂದನಾ ಕುಟುಂಬಸ್ಥರಿಗೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಸ್ಪಂದನ ಕುಟುಂಬಸ್ಥರ ನೋವಿನಲ್ಲಿ ಸರ್ಕಾರ ಭಾಗಿಯಾಗಲಿದೆ ಎಂದರು.
Saval TV on YouTube