ಮಂಡ್ಯ: ನಗರದ ಖಾಸಗಿ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಯುತ್ತಿರುವ ಪತ್ರಕರ್ತರ ಅಂತರ್ ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಮಂಡ್ಯಗೆ ಭೇಟಿ ನೀಡುತ್ತಿರುವ ಸಿಎಂ ಸಿದ‍್ಧರಾಮಯ್ಯಗೆ ಬಿಜೆಪಿ ಜಿಲ್ಲಾ ಘಟಕ ವ್ಯಂಗ್ಯವಾಗಿ ಸ್ವಾಗತಿಸಿದೆ.
ಮಂಡ್ಯಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಸಿಎಂಗೆ ವ್ಯಂಗ್ಯವಾಡಿರುವ ಮಂಡ್ಯ ಜಿಲ್ಲಾ ಬಿಜೆಪಿ ಘಟಕ, ತಮಿಳುನಾಡಿಗೆ ನೀರು ಬಿಟ್ಟು ಮಂಡ್ಯಕ್ಕೆ ಆಗಮಿಸ್ತಿರುವ ಸಿಎಂಗೆ ಸ್ವಾಗತ. ರೈತರ ಪಂಪ್ ಸೆಟ್ಗಳಿಗೆ ಸರಿಯಾಗಿ ಕರೆಂಟ್ ನೀಡದೆ, ರೈತರ ಬಾಳನ್ನು ಕತ್ತಲೆ ಮಾಡಿ ಜಿಲ್ಲೆಗೆ ಆಗಮಿಸ್ತಿರುವ ಸಿಎಂಗೆ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಂಡ್ಯ ಜಿಲ್ಲಾ ಬಿಜೆಪಿ ಲೇವಡಿ ಮಾಡಿದೆ.
Saval TV on YouTube