ಮನೆ ರಾಜಕೀಯ ಇಂದು ಸಂಜೆ ದೆಹಲಿಗೆ ಸಿಎಂ: ಹೈಕಮಾಂಡ್’ನೊಂದಿಗೆ ರಾಜ್ಯ ರಾಜಕಾರಣ ಚರ್ಚೆ ಸಾಧ್ಯತೆ

ಇಂದು ಸಂಜೆ ದೆಹಲಿಗೆ ಸಿಎಂ: ಹೈಕಮಾಂಡ್’ನೊಂದಿಗೆ ರಾಜ್ಯ ರಾಜಕಾರಣ ಚರ್ಚೆ ಸಾಧ್ಯತೆ

0

ಬೆಂಗಳೂರು(Bengaluru): ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದು, ಸಮಯಾವಕಾಶ ಸಿಕ್ಕಲ್ಲಿ ರಾಜ್ಯ ರಾಜಕಾರಣದ ಕುರಿತು ಹೈಕಮಾಂಡ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನ ಭೇಟಿಯಾಗುವ ಸಾಧ್ಯತೆ ಇದೆ. ಸಮಯ ಕೇಳಿದ್ದೇನೆ, ಅವರಿನ್ನೂ ಸಮಯ ಕೊಟ್ಟಿಲ್ಲ. ಅವರು ಸಮಯ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ನಡ್ಡಾ ನಂತರ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಭೇಟಿ ಮಾಡಬೇಕೆಂದುಕೊಂಡಿದ್ದೇನೆ ಎಂದರು.

ಸುಪ್ರೀಂ ಕೋರ್ಟ್​’ನಲ್ಲಿ ನವೆಂಬರ್ 30 ರಂದು ಗಡಿ ವಿವಾದ ಕುರಿತ ಪ್ರಕರಣದ ಅರ್ಜಿ ವಿಚಾರಣೆಗೆ ಬರಲಿದೆ. ಹಾಗಾಗಿ ಪ್ರಕರಣ ಕುರಿತು ನಮ್ಮ ಹಿರಿಯ ವಕೀಲ ಮುಕುಲ್ ರಹೊಟೊಗಿ ಅವರನ್ನು ಭೇಟಿಯಾಗುತ್ತೇನೆ. ರಾಜ್ಯದ ಮಾಹಿತಿ ನೀಡಿ ಚರ್ಚಿಸಲಾಗುತ್ತದೆ ಎಂದರು.

ಸಂವಿಧಾನ ತಿದ್ದಿದ್ದು ಕಾಂಗ್ರೆಸ್:

ಬಿಜೆಪಿಯವರು ಸಂವಿಧಾನವನ್ನೇ ತಿರುಚಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಕಿಡಿಕಾರಿದ ಸಿಎಂ, ಸಂವಿಧಾನ ತಿದ್ದಿದ್ದು ಕಾಂಗ್ರೆಸ್. ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನವನ್ನು ಗಾಳಿ ತೂರಿದ್ದು ಕಾಂಗ್ರೆಸ್, ವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿ ಎಲ್ಲರನ್ನು ಜೈಲಿಗೆ ಹಾಕಿದ್ದು ಕಾಂಗ್ರೆಸ್. ಅವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

ಹಿಂದಿನ ಲೇಖನಶ್ರದ್ಧಾ ವಾಲಕರ್‌ ಹತ್ಯೆ ಪ್ರಕರಣ: ಅಫ್ತಾಬ್’ಗೆ ಮತ್ತೆ ಸುಳ್ಳು ಪತ್ತೆ ಪರೀಕ್ಷೆ
ಮುಂದಿನ ಲೇಖನಸಿಎಂ ಬೊಮ್ಮಾಯಿ ಮೈಸೂರು ಜಿಲ್ಲಾ ಪ್ರವಾಸ: ಸಂಚಾರ ಮಾರ್ಗ ಬದಲಾವಣೆ