ಮನೆ ರಾಜ್ಯ ಡಿಸಿಸಿ ಅಖಾಡಕ್ಕೆ ಸಿಎಂ ಎಂಟ್ರಿ – ಇಕ್ಕಟ್ಟಿಗೆ ಸಿಲುಕಿದ ಉಭಯ ಬಣ

ಡಿಸಿಸಿ ಅಖಾಡಕ್ಕೆ ಸಿಎಂ ಎಂಟ್ರಿ – ಇಕ್ಕಟ್ಟಿಗೆ ಸಿಲುಕಿದ ಉಭಯ ಬಣ

0

ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿಯಾಗಿದ್ದಾರೆ. ಜಾರಕಿಹೊಳಿ‌ ಬಣ ಹಾಗೂ ಸವದಿ-ಕತ್ತಿ ಬಣದಿಂದ ಚಾಣಾಕ್ಷ ನಡೆಯನ್ನು ಸಿಎಂ ಅನುಸರಿಸಿದ್ದಾರೆ.

ಸಿಎಂ ಪ್ರವೇಶದ ಕಾರಣಕ್ಕೆ ಕಾಂಗ್ರೆಸ್ ‌ಕಾರ್ಡ್ ಪ್ಲೇ ಮಾಡಬೇಕಾದ ಅನಿವಾರ್ಯತೆ ಡಿಸಿಸಿ ಬ್ಯಾಂಕ್‌ನಲ್ಲಿ ಎದುರಾಗಿದೆ. ಉಭಯ ಬಣಗಳಿಂದ ಚಾಣಾಕ್ಷ ನಡೆ, ಯಾವ ಬಣಕ್ಕೆ ಅಧ್ಯಕ್ಷಗಿರಿ ಎಂಬುದು ಕುತೂಹಲ ಕೆರಳಿಸಿದೆ.

ಜಾರಕಿಹೊಳಿ‌ ಬಣದಿಂದಲೂ ಕಾಂಗ್ರೆಸ್ ಮೂಲದ ಕಾರ್ಯಕರ್ತನೇ ಅಧ್ಯಕ್ಷ ಹುದ್ದೆಗೆ ಕಣಕ್ಕಿಳಿಸಲಾಗಿದೆ. ಇತ್ತ ಕಾಂಗ್ರೆಸ್ ಹಿರಿಯ ಶಾಸಕರನ್ನು ಕಣಕ್ಕಿಳಿಸಲು ಸವದಿ-ಕತ್ತಿ ಬಣ ನಿರ್ಧಾರ ತೆಗೆದುಕೊಂಡಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಅಧ್ಯಕ್ಷ-ಉಪಾಧ್ಯಕ್ಷ ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ಸಿಎಂ ಸೂಚನೆ ನೀಡಿದ್ದಾರೆ. ರಕಿಹೊಳಿ‌ ಬಣದಿಂದ ಅಪ್ಪಾಸಾಹೇಬ್ ಕುಲಗೋಡೆ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಾಧ್ಯತೆ ಇದ್ದು ಸವದಿ-ಕತ್ತಿ ಬಣದಿಂದ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಕಣಕ್ಕೆ ಸಾಧ್ಯತೆ ಹೆಚ್ಚಾಗಿದೆ. ಸಿಎಂ ಸಿದ್ದರಾಮಯ್ಯ ಎಂಟ್ರಿ ಕಾರಣಕ್ಕೆ ಉಭಯ ಬಣದ ನಾಯಕರು ಇಕ್ಕಟ್ಟಿಗೆ ಸಿಲುಕಿದಂತಾಗಿದೆ.