ಮೈಸೂರು : ಬಿಇಒ ಮೇಲೆ ಸಿಎಂ ಪುತ್ರ ಯತೀಂದ್ರ ಬೆಂಬಲಿಗ ದಾದಾಗಿರಿ ನಡೆಸಿದ್ದಾನೆ. ಅಧಿಕಾರಿ ಮೇಲೆ ಕೈ ಮಾಡಿ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ದಾನೆ.
ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ಗೆ ಸಾರ್ವಜನಿಕವಾಗಿ ಅವಾಚ್ಯ ಶದ್ಧಗಳಿಂದ ನಿಂದಿಸಿ ಉದ್ಧಟತನ ಮೆರೆದಿದ್ದಾನೆ. ಬಿಳುಗಲಿ ಗ್ರಾಮದ ಯತೀಂದ್ರ ಬೆಂಬಲಿಗ ಕುಮಾರ್ ದರ್ಪ ಮೆರೆದಿರುವ ವಿಡಿಯೋ ವೈರಲ್ ಆಗಿದೆ.
ಕುಮಾರ್ ಪತ್ನಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದಾರೆ. ಆದ್ರೆ ನಾನೇ ಗ್ರಾಮ ಪಂಚಾಯಿತಿ ಸದಸ್ಯ ಎಂದು ಹೇಳಿಕೊಂಡು ಅವಾಜ್ ಹಾಕಿದ್ದಾನೆ. ನಂಜನಗೂಡಿನಲ್ಲಿ ಯತೀಂದ್ರ ಕೆಡಿಪಿ ಸಭೆ ನಡೆಸುತ್ತಿದ್ರು. ಈ ವೇಳೆ ಸಭೆಯ ಹೊರಗಡೆ ಯತೀಂದ್ರ ಬೆಂಬಲಿಗೆ ಕುಮಾರ್ ದಾದಾಗಿರಿ ಪ್ರದರ್ಶಿಸಿದ್ದಾನೆ.
ಬಿಳುಗಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾನು ಹೇಳಿದ ವ್ಯಕ್ತಿಗೆ ಅತಿಥಿ ಶಿಕ್ಷಕರ ಹುದ್ದೆ ನೀಡಿಲ್ಲ ಎಂದು ಹಲ್ಲೆ ನಡೆಸಿದ್ದಾನೆ. ಇದೀಗ ಯತೀಂದ್ರ ಬೆಂಬಲಿಗನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.















