ಮನೆ ಸುದ್ದಿ ಜಾಲ ಕಾಫಿನಾಡಲ್ಲಿ ಸಿಎಂ ಪತ್ನಿ ಟೆಂಪಲ್ ರನ್..!

ಕಾಫಿನಾಡಲ್ಲಿ ಸಿಎಂ ಪತ್ನಿ ಟೆಂಪಲ್ ರನ್..!

0

ಚಿಕ್ಕಮಗಳೂರು : ಕಾಫಿನಾಡಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಇತ್ತ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಟೆಂಪಲ್ ರನ್ ನಡೆಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್ ಪುರದಲ್ಲಿ ಸಿಎಂ ಹಾಗೂ ಸಿಎಂ ಪತ್ನಿ ವಾಸ್ತವ್ಯ ಹೂಡಿದ್ದಾರೆ. ನಿನ್ನೆ (ಏ.12) ಮಧ್ಯಾಹ್ನ 3 ಗಂಟೆಗೆ ಪಾರ್ವತಿ ಅವರು ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದಿದ್ದು, ಬಳಿಕ ಶೃಂಗೇರಿಗೆ ತೆರಳಿ ಶಾರದಾಂಭೆಗೆ ಪೂಜೆ ಸಲ್ಲಿಸಿದ್ದಾರೆ.

ಪೂಜೆ ಬಳಿಕ ಶಾರದಾಂಬೆ ದೇಗುಲದ ಮಠದಲ್ಲೇ ವಾಸ್ತವ್ಯ ಹೂಡಿದ್ದರು. ಇತ್ತ ಸಿಎಂ ಎನ್.ಆರ್.ಪುರದ ಐಬಿಯಲ್ಲಿ ತಂಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ-ಶೃಂಗೇರಿ ತಾಲೂಕಿನಲ್ಲಿಂದು 38 ಕೋಟಿ ರೂ. ವೆಚ್ಚದ ಸೇತುವೆ ಹಾಗೂ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಸಿಎಂ ದಂಪತಿ ವಾಪಸ್ಸಾಗಲಿದ್ದಾರೆ.