ಮನೆ ಮನೆ ಮದ್ದು ಮರದರಶಿನ

ಮರದರಶಿನ

0

ವಾಸ್ತವವಾಗಿ ಬರ್ಬೆರಿಸ್ ಅರಿಸ್ಟಾಟಾ ಎಂಬ ಹಿಮಾಲಯದ ಪೊದರು ಸಸ್ಯಕಾಂಡವೇ ಮರದರಿಶಿನ. ಹಿಮಾಲಯ ಮೂಲದ ಸಸ್ಯದ ಅತಿಬಳಕೆಯೇ ಈ ಸಸ್ಯವನ್ನು ವಿನಾಶದಂಚಿಗೆ ತಳ್ಳಿದೆ. ದಕ್ಷಿಣ ಭಾರತದ ಭಾರಿ ಮರ ಸುತ್ತು ಬಳ್ಳಿಯೊಂದರ ತೋರ ಕಾಂಡವು ಸಹ ಒಳಕೊಯ್ತದಲ್ಲಿ ಅರಿಶಿಣದ ಬಣ್ಣದ್ದು, ಹಿಮಾಲಯದ ವನಸ್ಪತಿ ಪ್ರತಿನಿಧಿಯಾಗಿ ಈ ಬಳ್ಳಿಯ ಬಳಕೆ ಆರಂಭವಾಯಿತು.

ಹೃದಯಕಾರದ ಹಸಿರು ಎಲೆ, ನಿಧಾನ ಆದರೆ ಭಾರೀ ಮರಕ್ಕೆ ಹಬ್ಬ ಬಲ್ಲ ಬಳ್ಳಿ. ಕಾಂಡ ಎಲೆಯದಿರಲಿ, ಬಲಿತಿರಲಿ, ಗೋಧಿ ನಾಗರದ ಚಿನ್ನದ ಬಣ್ಣದಿಂದ ಕೂಡಿರುತ್ತದೆ. ಬಟಾಣಿ ಕಾಳು ಗಾತ್ರದ ಕಾಯಿ, ಬಲಿತ ರೆಂಬೆ ಮತ್ತು ಪೆನ್ಸಿಲ್ ಗಾತ್ರದ ಬಳ್ಳಿಗಳನ್ನು ನೆಟ್ಟು ಅಥವಾ ಕಾಯಿ ಮೊಳೆಯಿಸಿ ಹೊಸ ಸಸಿ ತಯಾರಿಸಬಹುದು.    

ಔಷಧೀಯ ಗುಣಗಳು :-

* ಕಣ್ಣಿನ ರೋಗಗಳಲ್ಲಿ ಇದು ತುಂಬಾ ಹಿತಕಾರಿಯಾಗಿ ಪರಿಣಮಿಸಿದೆ, ಅದನ್ನು ಹೊರಗಿನ ಸ್ಥಳಗಳಿಗೆ ಮಾತ್ರ ಹಚ್ಚಬೇಕು.

* ಮುಖದ ಕಾಂತಿಯನ್ನು ಹೆಚ್ಚಿಸಲು ಮೊಡವೆ ಕಲೆಗಳ ಪರಿಹಾರಕ್ಕೆ ಇದನ್ನ ತೇಯ್ದು ಹಚ್ಚಬೇಕು.

* ಹಳೆಜ್ವರ, ಮಲೇರಿಯಾ ಸೋಂಕು ಪರಿಹಾರಕ್ಕೆ ಇದರ ಕಾರಣದ ಕಷಾಯವನ್ನು ಮಾಡಿ ಸೇವಿಸಿದರೆ ತುಂಬಾ ಲಾಭದಾಯಕ.

* ಇದರ ಕಷಾಯದಲ್ಲಿ ಹಳೆಯ ಹುಣ್ಣುಗಳನ್ನು ಗುಣಪಡಿಸುವ ಅಂಶವಿದೆ.

* ಹೃದಯದ ಪೆಶಿಗಳಿಗೆ ಉತ್ತೇಜಕ ಗುಣವು ಇದಕ್ಕಿದೆ.