ಬೆಂಗಳೂರು : ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಬೆಳ್ಳಿಗ್ಗೆ ಚುಮುಚುಮು ಚಳಿ ಶುರುವಾಗಿದೆ. ಕಾಡುತ್ತಿರುವ ಚಳಿಗೆ ಗಂಟೆಗೊಂದು ಕಪ್ ಕಾಫಿ ಕುಡಿಯಬೇಕೆಂಬ ಆಸೆಯಾಗುತ್ತೆ. ಆದರೆ ಈ ಬಿಸಿ ಕಾಫಿ ನಿಮ್ಮ ನಾಲಿಗೆಯನ್ನಷ್ಟೇ ಅಲ್ಲ, ಜೇಬನ್ನೂ ಸುಡಲಿದೆ! ಯಾಕಂದರೆ, ಒಂದು ಕೆ.ಜಿ ಕಾಫಿ ಪುಡಿಗೆ 800-1200 ರೂ.ಗೆ ಏರಿಕೆಯಾಗಿದೆ.
ಕಾಫಿ ಪುಡಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಮುಂದಿನ ತಿಂಗಳು ಮತ್ತೆ ಕೆ.ಜಿಗೆ 200 ರೂ.ವರೆಗೂ ಬೆಲೆ ಏರಿಕೆ ಸಾಧ್ಯತೆ ಇದೆ. 2022 ರಲ್ಲಿ ಕೆ.ಜಿಗೆ 300-400 ರೂ. ಇದ್ದ ಕಾಫಿಪುಡಿ ಬೆಲೆ ಇದೀಗ 1200 ರೂ.ವರೆಗೂ ಏರಿಕೆಯಾಗಿದೆ.
ಕಳೆದ ಒಂದೇ ವರ್ಷದಲ್ಲಿ ಕೆ.ಜಿ ಕಾಫಿ ಪುಡಿ ಬೆಲೆ 200 ರೂ. ಹೆಚ್ಚಳವಾಗಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ. ಇನ್ನೂ ತಕ್ಷಣವೇ ಕಾಫಿ ಬೆಲೆ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹೋಟೆಲ್ ಅಸೋಸಿಯೇಷನ್ ಅಭಿಪ್ರಾಯಪಟ್ಟಿದೆ.
ಕಾಫಿ ಅಥವಾ ಟೀ ಇಲ್ಲದೇ ಅದೆಷ್ಟೋ ಜನರ ದಿನ ಆರಂಭವಾಗುದಿಲ್ಲ. ಅದ್ರಲ್ಲೂ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜನ ಕಾಫಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಆದ್ರೇ ಕಾಫಿ ಪ್ರೀಯರಿಗೆ ಬೆಲೆ ಎರಿಕೆಯಿಂದ ಶಾಕ್ ಆಗಿದೆ.
ಇನ್ನೂ ಕಾಫಿ ಪುಡಿ ಬೆಲೆ ಏರಿಕೆ ಕೇವಲ ವ್ಯಾಪಾರಸ್ಥರಿಗೆ ಮಾತ್ರವಲ್ಲ ಜನರಿಗೂ ಆಗಿದ್ದು, ಪ್ರತಿನಿತ್ಯ 5-6 ಸಲ ಕಾಫಿ ಕುಡಿಯೋರಿಗೆ ಕಷ್ಟವಾಗಿದೆ. ಜೊತೆಗೆ ಮಧ್ಯಮವರ್ಗದವರಿಗೆ ಇದು ಹೊರೆಯಾಗಿದೆ.
ಕಾಫಿ ಪುಡಿ ಬೆಲೆ ಏರಿಕೆಗೆ ಪ್ರಮುಖ ಕಾರಣ – ಕಾಫಿ ಅತಿ ಹೆಚ್ಚು ಬೆಳೆಯುವ ಬ್ರೇಜಿಲ್, ವಿಯಟ್ನಾಂನಲ್ಲಿ ಕಾಫಿ ಬೆಳೆ ಕುಂಠಿತ, ರಾಜ್ಯದಲ್ಲಿ ಅತೀ ಹೆಚ್ಚಿನ ಮಳೆಯಾಗಿ ಕಾಫಿ ಹೂವುಗಳು ಉದುರಿದ್ದು ಕಾಫಿ ಬೀಜ ಸಿಗ್ತಿಲ್ಲ. ಕಾಫಿ ಬೆಳೆಗಾರಿಕೆಗೆ ಕಾರ್ಮಿಕರ ಕೊರತೆ, ಇದರಿಂದ ಕಾಫಿ ಪುಡಿ ವ್ಯಾಪಾರ ಮಾಡೋದೇ ದೊಡ್ಡ ಸವಾಲಾಗಿದೆ. ಮುಂದಿನ ತಿಂಗಳು ಮತ್ತೆ ಕೆ.ಜಿಗೆ 150-200 ರೂಪಾಯಿ ಕಾಫಿಪುಡಿ ಬೆಲೆಯಲ್ಲಿ ಏರಿಕೆ ಅಂತಾರೆ ವ್ಯಾಪಾರಸ್ಥರು ಎನ್ನಲಾಗಿದೆ.















