ಮನೆ ರಾಷ್ಟ್ರೀಯ ಕಾಫ್ ಸಿರಪ್ ಸ್ಮಗ್ಲಿಂಗ್‌ – ಉತ್ತರ ಪ್ರದೇಶದಲ್ಲಿ ಫಾರ್ಮಾ ಕಂಪನಿಗಳ ವಿರುದ್ಧ ಕೇಸ್‌..!

ಕಾಫ್ ಸಿರಪ್ ಸ್ಮಗ್ಲಿಂಗ್‌ – ಉತ್ತರ ಪ್ರದೇಶದಲ್ಲಿ ಫಾರ್ಮಾ ಕಂಪನಿಗಳ ವಿರುದ್ಧ ಕೇಸ್‌..!

0

ಲಕ್ನೋ : ವಾರಣಾಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್ (ಕೆಮ್ಮಿನ ಸಿರಪ್‌) ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಕಳೆದ ನವೆಂಬರ್‌ 15ರಂದು ಕಾರ್ಯಾಚರಣೆ ವೇಳೆ 26 ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಅದರ ಭಾಗವಾಗಿ ಕಾರ್ಯಾಚರಣೆ ಮುಂದುವರಿಸಿದಾಗ 12 ಅನುಮಾನಾಸ್ಪದ ಕಂಪನಿಗಳು ಕಂಡುಬಂದಿದ್ದವು ಎಂದು ಇಲಾಖೆಯ ಇನ್ಸ್‌ಪೆಕ್ಟರ್ ಜನಬ್ ಅಲಿ ಹೇಳಿದ್ದಾರೆ.

ಈ 12 ಕಂಪನಿಗಳ ಕುರಿತು ತನಿಖೆ ಮಾಡಲು ತಂಡ ಹೋದಾಗ, ಕೆಲವು ಮುಚ್ಚಿರುವುದು, ಕೆಲ ಕಂಪನಿಗಳ ವಿಳಾಸದಲ್ಲಿ ಬೇರೆ ಮಳಿಗೆಗಳಿರುವುದು ಕಂಡುಬಂದಿವೆ. ಹೀಗಾಗಿ ಈ ಔಷಧ ಕಂಪನಿಗಳ ನಿರ್ವಾಹಕರಿಗೆ ಸ್ಪಷ್ಟೀಕರಣ ಕೋರಿ ನೋಟಿಸ್ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಈ ಕಂಪನಿಗಳ ಮಾಲೀಕರು ತಮ್ಮ ಪ್ರತಿಕ್ರಿಯೆ ಸಲ್ಲಿಸದ ಹಿನ್ನೆಲೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.