ಮಂಡ್ಯ: ಹಾಸ್ಯನಟ ಕೆ.ಆರ್ ಪೇಟೆ ಶಿವರಾಜ್ ತಂದೆ ತಂದೆ ರಾಮೇಗೌಡ (85) ನಿಧನರಾಗಿದ್ದಾರೆ.
ಕೆ.ಆರ್ ಪೇಟೆ ಪಟ್ಟಣದ ನಿವಾಸದಲ್ಲಿ ನಿನ್ನೆ(ಗುರುವಾರ) ವಯೋಸಜ ಸಮಸ್ಯೆಯಿಂದ ಬಳಲುತಿದ್ದ ರಾಮೇಗೌಡ ಮೃತಪಟ್ಟಿದ್ದು, ಇಂದು ಸ್ವಗ್ರಾಮ ರಾಜಘಟ್ಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ರಾಮೇಗೌಡರು ಪತ್ನಿ ಸಾವಿತ್ರಮ್ಮ, ಪುತ್ರ ಕೆ.ಆರ್.ಪೇಟೆ ಶಿವರಾಜ್ ಸೇರಿದಂತೆ ನಾಲ್ವರು ಗಂಡು ಮಕ್ಕಳು ಹಾಗು ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಅಪಾರ ಬಂಧು-ಬಳಗ, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
Saval TV on YouTube