ಮನೆ ಆರೋಗ್ಯ ಸಾಮಾನ್ಯ ಮಾನಸಿಕ ಕಾಯಿಲೆಗಳು

ಸಾಮಾನ್ಯ ಮಾನಸಿಕ ಕಾಯಿಲೆಗಳು

0

ಖಿನ್ನತೆ

ಖಿನ್ನತೆ  ಎಂಬುದು ಮಾಮೂಲಿನ ಬೇಸರವಲ್ಲ. ನಾವಣೆಸಿದ್ದು ಆಗದಿದ್ದಾಗ ತೊಂದರೆ ಕಷ್ಠಗಳು ಬಂದಾಗ ಬೇಸರವಾಗುತ್ತದೆ. ದುಃಖವಾಗುತ್ತದೆ. ಆದರೆ ಸ್ವಲ್ಪ ಹೊತ್ತು ಅಥವಾ ಒಂದೆರಡು ದಿನಗಳಿದ್ದು ಮರೆಯಾಗುತ್ತದೆ. ಆದರೆ ಖಿನ್ನತೆ ಕಾಯಿಲೆ ಬಂದಾಗ ಈ ಬೇಸರ ದುಃಖದ ಭಾವನೆಗಳು ಹೆಚ್ಚು ಕಡಿಮೆ ಸದಾ ಇದ್ದು ಎರಡು ವಾರಗಳು ಅಥವಾ ಹೆಚ್ಚಿನ ಅವಧಿ ಕೆಲವೊಮ್ಮೆ ತಿಂಗಳುಗಟ್ಟಲೆ ನಮ್ಮನ್ನು ಕಾಡುತ್ತವೆ. ಅಥವಾ ಕೆಲವು ವಾರಗಳು ತಿಂಗಳು ಕಾಲ ಇದ್ದು ಮರೆಯಾಗಿ ಮತ್ತೆ ಮತ್ತೆ ಬರುತ್ತವೆ. ಖಿನ್ನತೆ ಕಾಯಿಲೆಯಿಂದಾಗಿ ಜೀವನದ ಎಲ್ಲ ನಗು ನಲಿವು ಮರೆಯಾಗುತ್ತವೆ ನಾವು ಅಸಹಾಯಕರಾಗುತ್ತೇವೆ ನಾನು ಅಪ್ರಯೋಜಕ ಕೆಲಸಕ್ಕೆ ಬಾರದವನು. ಯಾವ ಕೆಲಸ ಕರ್ತವ್ಯವನ್ನು ನಿಭಾಯಿಸಲಾರೆ ಎಂದುಕೊಳ್ಳುತ್ತೇವೆ. ಬಾಳಿನಲ್ಲಿ ಒಳ್ಳೆಯ ದಿನಗಳು ಸುಖ ಸಂತೋಷ ಮತ್ತೆ ಬಾರವು ಎಂದು ನಿರಶರಾಗುತ್ತೇವೆ.

ಖಿನ್ನತೆ ಕಾಯಿಲೆ ಇದೆ ಎಂದು ಗುರುತಿಸುವುದು ಹೇಗೆ?

ನಮಗೆ ಅಥವಾ ನಮ್ಮ ಮನೆಯವರಿಗೆ ಬಂದು- ಮಿತ್ರರಲ್ಲಿ ಒಬ್ಬರಿಗೆ ಖಿನ್ನತೆ ಕಾಯಿಲೆ ಬಂದಿದೆ ಎಂದು ಗುರುತಿಸುವುದು ಹೇಗೆ? ಎರಡು ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಈ ಕೆಳ ಕಾಣುವ ಲಕ್ಷಣ ತೊಂದರೆಗಳಿವೆಯೇ ಗಮನಿಸಿ

ಯಾವಾಗಲೂ ಬೇಸರ ದುಃಖದ ಭಾವನೆ ಇದರಿಂದಾಗಿ ಅಳು ಬರುವುದು

ಎಲ್ಲದರಲ್ಲೂ ನಿರಾಸಕ್ತಿ, ನಿರುತ್ಸಾಹ ಏನು ಬೇಡ ಅನಿಸುವುದು

ಹಿಂದೆ ಸಂತೋಷ ಉತ್ಸಾಹಗಳನ್ನು ನೀಡುತ್ತಿದ್ದ ಚಟುವಟಿಕೆಗಳಿಂದ ಕೂಡ ಈಗ ಸಂತೋಷವಿಲ್ಲ

ಅಸಹಾಯಕ ಹಾಗೂ ನಿರಾಶ ಭಾವನೆ

ನಾನು ಅಪ್ರಯೋಜಕ, ಯಾವ ಕೆಲಸವು ನನ್ನಿಂದಾಗದು, ಇನ್ನೊಬ್ಬರಿಗೆ ಮನೆಯವರಿಗೆ ಸಮಾಜಕ್ಕೆ ನಾನು ಹೊರೆ ಎಂಬ ಆಲೋಚನೆ

ನಗು-ನಲಿವು ಯಶಸ್ಸು ಒಳ್ಳೆಯ ದಿನಗಳು ಇನ್ನೆಂದಿಗೂ ಬರುವುದಿಲ್ಲ ಎನಿಸುವುದು.

ನಿದ್ರಾ ತೊಂದರೆಗಳು ಅಥವಾ ಹೆಚ್ಚು ನಿದ್ರೆ

ಹಸಿವು ಕಡಿಮೆಯಾಗುವುದು ಬಾಯಿ ರುಚಿ ಇಲ್ಲದಿರುವುದು

ತೂಕ ಕಡಿಮೆಯಾಗುವುದು

ದೇಹದ ಚಲನ-ವಲನಗಳು ನಿಧಾನವಾಗುವುದು

ಮನಸ್ಸಿನ ಆಲೋಚನೆ, ನಿರ್ಧಾರ ಮಾಡುವ ಪ್ರಕ್ರಿಯೆಗಳು ನಿಧಾನವಾಗಿ ವ್ಯಕ್ತಿ ಮಂಕಾಗುವುದು.

ಅಸ್ಪಷ್ಟ ಆದರೆ ತೀವ್ರವಾದ ಶಾರೀರಿಕ ನೋವುಗಳು ಸುಸ್ತು, ನಿಶಕ್ತಿ ಕಾಣಿಸಿಕೊಳ್ಳುವುದು

ಸಾಯುವ ಇಚ್ಛೆ ಆತ್ಮಹತ್ಯೆಯ ಆಲೋಚನೆಯ ಪ್ರಯತ್ನ

ಖಿನ್ನತೆ ಕಾಯಿಲೆಯನ್ನು ಅಂತಿಮವಾಗಿ ನಿರ್ಣಯಿಸುವವರು ವೈದ್ಯರು ಮೇಲೆ ಕಾಣಿಸಿದ ಲಕ್ಷಣಗಳಲ್ಲಿ ಮೂರಕ್ಕಿಂತ ಹೆಚ್ಚಿನ ಲಕ್ಷಣಗಳು ಅವರು ವೈದ್ಯರನ್ನು ಅಥವಾ ಮನೋವೈದ್ಯರನ್ನು ಕಾಣಬೇಕು.

ಖಿನ್ನತೆ ಕಾಯಿಲೆ ಏಕೆ ಬರುತ್ತದೆ ?

ಅನೇಕ ಅಂಶಗಳು ಒಟ್ಟುಗೂಡಿದಾಗ, ಖಿನ್ನತೆ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕೆಲವು ನೋವಿನ ಸಂಗತಿಗಳು. ಜೀವನದ ಕೆಟ್ಟ ಘಟನೆಗಳು ವ್ಯಕ್ತಿಯ ನಕಾರಾತ್ಮಕ ಮನೋಭಾವ. ಧೋರಣೆ ಮತ್ತು ಅಹಿತ ಪರಿಸರಗಳು ಖಿನ್ನತೆಯನ್ನು ಪ್ರಚೋದಿಸುತ್ತದೆ. ಉದಾಹರಣೆಗೆ ನಿರೀಕ್ಷಿಸದ ದಿಢೀರ್ ಕಷ್ಟನಷ್ಟಗಳು, ಸೋಲು, ನಿರಾಸೆಗಳು ಅಥವಾ ಮೇಲಿಂದ ಮೇಲೆ ಬರುವ ಕಷ್ಟ ನಷ್ಟಗಳು ಸಾವು ಅಗಲಿಕೆ ಗುರಿ ಉದ್ದೇಶಗಳು ಈಡೇರದಿರುವುದು ಪ್ರೀತಿ ವಿಶ್ವಾಸಗಳ ಅಭಾವ ವಿಪರೀತ ಟಿಕೆ, ಟಿಪ್ಪಣಿಗಳು, ಮೋಸ, ವಂಚನೆ ಅವಮಾನಗಳು, ದೀರ್ಘಕಾಲ ಕಾಡುವ ಅಥವಾ ಸಾಮಾಜಿಕ ಕಳಂಕ ತರುವ ಕಾಯಿಲೆಗಳು ಅಸಾಧ್ಯ ನೋವು ನೆರಳಿಕೆ ಮತ್ತು ಪರಾವಲಂಬನೆ ಹಾಗೂ ಸಾವನ್ನು ತರುವ ಕಾಯಿಲೆಗಳು, ನಿರುದ್ಯೋಗ, ಆರ್ಥಿಕ ಮುಗ್ಗಟ್ಟು, ಅತೃಪ್ತ ಕೆಲವೂ ಔಷಧಿಗಳು (ಮುಖ್ಯವಾಗಿ ಅಧಿಕಾರದ ತಡೆಗೆ ಕೊಡುವ ಮಾತ್ರೆಗಳು, ಗರ್ಭ ನಿರೋಧಕ ಗುಳಿಗೆಗಳು) ಋತುಚಕ್ರ, ಋತುಬಂಧ, ಇಳಿ ವಯಸ್ಸು ಇತ್ಯಾದಿ. ಶೇಕಡ 10ರಷ್ಟು ಪ್ರಕರಣಗಳಲ್ಲಿ ಖಿನ್ನತೆ ಅನುವಂಶಿಕವಾಗಿ ಬರುತ್ತದೆ.

ಖಿನ್ನತೆಯಲ್ಲಿ ಮಿದುಳಿನಲ್ಲಾಗುವ ವ್ಯತ್ಯಾಸಗಳೇನು ?

ಮಿದುಳು ಮೇಲ್ನೋಟಕ್ಕೆ ಚೆನ್ನಾಗಿಯೇ ಇರುತ್ತದೆ. ಯಾವ ರೀತಿಯ ನ್ಯೂನತೆ, ಕೊರತೆ, ಹಾನಿ ಕಂಡು ಬರುವುದಿಲ್ಲ. ನರಕೋಶಗಳು ಒಂದಕ್ಕೊಂದು ಕೊಡುವ ಸ್ಥಳದಲ್ಲಿ ಸ್ಥಳಗಳಲ್ಲಿ (ಸೈನಾಪ್ಸ್) ನರವಾಹಕ ವಸ್ತುಗಳಾದ ಡೋಪೋಮಿನ್ ಮತ್ತು ಸೆರೋಟೋನಿನ್ ಗಳ ಪ್ರಮಾಣ ಕಡಿಮೆ ಇರುತ್ತದೆ.

ಪರಿಸರ ವ್ಯಕ್ತಿಯ ಜೀವನದಲ್ಲಿ ಯಾವ ಕಷ್ಟ ನಷ್ಟಗಳಿಲ್ಲದಿದ್ದರೂ ಮೆದುಳಿನಲ್ಲಾಗುವ ಈ ರಾಸಾಯನಿಕ ಬದಲಾವಣೆಯಿಂದ ತೀವ್ರ ಖಿನ್ನತೆ ಕಾಣಿಸಿಕೊಳ್ಳಬಹುದು ಇದಕ್ಕೆ ಒಳಜನ್ಯ ಕಿನ್ನತೆ- ಎಂಡೋಜಿನೆಸ್ ಡಿಪ್ರೆಶನ್ ಎನ್ನುತ್ತಾರೆ.

ಖಿನ್ನತೆ ಖಾಯಿಲೆ ಯಾರಲ್ಲಿ ಹೆಚ್ಚು ?

ವಿವಿಧ ಅಧ್ಯಯನಗಳ ಪ್ರಕಾರ ಯಾವುದೇ ಸಮುದಾಯದಲ್ಲಿ ಕನಿಷ್ಠ ಶೇಕಡ 10 ಜನರಿಗೆ ಖಿನ್ನತೆ ಕಾಯಿಲೆ ಇರುತ್ತದೆ. ಯಾವುದೇ ಚಿಕಿತ್ಸಾಲಯ ಆಸ್ಪತ್ರೆಗಳಲ್ಲಿ ವೈದ್ಯ ಸಹಾಯಕ್ಕಾಗಿ ಹೋಗುವ ರೋಗಿಗಳಲ್ಲಿ ಶೇಕಡ 40 ರಿಂದ 50 ರಷ್ಟು ಜನರಿಗೆ ಖಿನ್ನತೆ ಕಾಯಿಲೆ ಇರುತ್ತದೆ. ಎಂದರೆ ಈ ಕಾಯಿಲೆಯೂ ಅಗಧಾತೆ ಅರ್ಥವಾಗುತ್ತದೆ. ಈ ಕಾಯಿಲೆ ಹೆಂಗಸರದಲ್ಲಿ ಹೆಚ್ಚು ಅದಿವಯಸ್ಸು, ಮಧ್ಯ ವಯಸ್ಸು, ಇಲಿ ವಯಸ್ಸಿನವರಲ್ಲಿ ಹೆಚ್ಚು ಇದಕ್ಕೆ ಬಡವ ಶ್ರೀಮಂತ ಗ್ರಾಮೀಣ ನಗರ ಪ್ರದೇಶವೆಂಬ ಬೇದ-ಭಾವ ಇಲ್ಲ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಲ್ಲಿ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು.

ಖಿನ್ನತೆ ಕಾಯಿಲೆ ಪತ್ತೆಹಚ್ಚಲು ಪರೀಕ್ಷೆ ಗಳಿವೆಯೇ ?

ನಿರ್ದಿಷ್ಟ ಪರೀಕ್ಷೆಗಳಾವುವು ಇಲ್ಲ ರೋಗ ಲಕ್ಷಣಗಳನ್ನು ಗಮನಿಸಿ ವೈದ್ಯರು ತಮ್ಮ ಅನುಭವದ ಮೇಲೆ ರೋಗ ನಿರ್ಣಯ ಮಾಡುತ್ತಾರೆ. ರೋಗಲಕ್ಷಣಗಳು, ಇತರರ ಶಾರೀರಿಕ ಕಾಯಿಲೆಗಳಿಂದ ಬಂದದ್ದಲ್ಲ ಎಂದು ಖಾತ್ರಿ ಮಾಡಿಕೊಳ್ಳಲು ಮಾಮೂಲಿನ ರಕ್ತ ಪರೀಕ್ಷೆ, ಕ್ಷಕಿರಣ, ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಮಾಡಿಸಬಹುದು. ಅಷ್ಟೇ, ಖಿನ್ನತೆಯ ಕಾಯಿಲೆಯ ಜೊತೆಗೆ ಇನ್ನ ಯಾವುದಾದರೂ ಶಾರೀರಿಕ ಅಥವಾ ಮಾನಸಿಕ ರೋಗವಿದೆಯೇ ಎಂಬುದನ್ನು ಅವರು ಗಮನಿಸುತ್ತಾರೆ.

ಖಿನ್ನತೆಗೆ ಸರಿಯಾದ ಚಿಕಿತ್ಸೆ ಯಾವುದು?

ಔಷಧಿಗಳು : ಇಮಿಪ್ರಮಿನ್, ಅಮಿಟ್ರಿಪ್ಪಲಿನ್, ಡಾತಿಪಿನ್, ಎಸ್ಸಿಟಲೋಪ್ರಾಂ, ಫ್ಲೂಯಾಕ್ಸೆಟೀನ್, ಸಾರ್ಟಾಲಿನ್ ಗಳು ಈ ಲಭ್ಯವಿದೆ. ಇವೆಲ್ಲ ಮೆದುಳಿನ ಮೇಲೆ ಪರಿಣಾಮ ಡೊಪಮಿನ್ ಮತ್ತು ಸರೋಟೊನಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ.

ಇವು ನಿದ್ರಾ ಮಾತ್ರೆಗಳಲ್ಲ, ಅಭ್ಯಾಸವನ್ನುಟು ಮಾಡುವುದಿಲ್ಲ ಸುರಕ್ಷಿತವಾದ ಔಷಧಿಗಳು ಎಂಬುದನ್ನು ಗಮನಿಸಿ ಕೆಲವು ಅಡ್ಡ ಪರಿಣಾಮಗಳಾಗಬಹುದು ಬಾಯಿಯ ಒಣಗುವುದು, ಮಲಬದ್ಧತೆ, ಕಣ್ಣು ಮಂಜಾಗುವುದು, ತಲೆ ಸುತ್ತು, ನಿದ್ರೆ ಹೆಚ್ಚುವುದು, ತೂಕಡಿಕೆ, ಮೂತ್ರ ಬಂದ್ ಆಗುವುದು ಇತ್ಯಾದಿ ಈ ಲಕ್ಷಣಗಳನ್ನು ವೈದ್ಯರಿಗೆ ತಿಳಿಸಿ ಔಷಧಿಗಳು ಕೆಲಸ ಮಾಡಿ ಖಿನ್ನತೆಯ ಲಕ್ಷಣಗಳು ಕಡಿಮೆಯಾಗಲು ಎರಡು ಮೂರು ವಾರಗಳು ಬೇಕಾಗಬಹುದು ಸಹನೆ ಇರಲಿ .

ಔಷಧಿಗಳನ್ನು ಕನಿಷ್ಠ ಮೂರು ತಿಂಗಳು ಸೇವಿಸಬೇಕು ಎಷ್ಟು ಕಾಲ ಸೇವಿಸಬೇಕೆಂಬುದು ವೈದ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಆರು ತಿಂಗಳಿಂದ ಒಂದು ವರ್ಷದವರೆಗೆ ಔಷಧಿ ಸೇವಿಸಬೇಕಾಗಿ ಬರಬಹುದು ಈ ಔಷದ ಸೇವಿಸುವಾಗ ಇತರ ಕಾಯಿಲೆಗಳು ಬಂದರೆ ಬೇರೆ ಔಷಧಿ ಸೇವಿಸಲು ಅಡ್ಡಿ ಇಲ್ಲ. ಆದರೆ ವೈದ್ಯರು ಉಸ್ತುವಾರಿ ಅಗತ್ಯ

ಆಪ್ತ ಸಲಹೆ ಸಮಾಧಾನ : ರೋಗಿಯೊಂದಿಗೆ ಸ್ನೇಹ ಪೂರಕವಾಗಿ ಮಾತನಾಡಿ ಆತನ ಕಷ್ಟ ಸುಖ ಸಮಸ್ಯೆಗಳನ್ನು ವಿಚಾರಿಸಿ ಆಪ್ತ ಸಲಹೆ ಸಮಾಧಾನ ನೀಡುವುದು ಒಂದು ಮೌಲಿಕವಾದ ಚಿಕಿತ್ಸಾ ವಿಧಾನ ಇದನ್ನು ವಾರಕ್ಕೆ ಎರಡು ಮೂರು ಸಲ ಪ್ರತಿ ಸಲ 30 ರಿಂದ 40 ನಿಮಿಷಗಳ ಕಾಲ ಮಾಡಬೇಕಾಗುತ್ತದೆ ವ್ಯಕ್ತಿ ಮನಸ್ಸನ್ನಾವರಿಸಿರುವ ನಕಾರಾತ್ಮಕ ಆಲೋಚನೆಗಳನ್ನು ತೀರ್ಮಾನಗಳನ್ನು ತೆಗೆದು ಸಕಾರಾತ್ಮಕ ಹಾಗೂ ಉತ್ತೇಜನಾತ್ಮಕ ಆಲೋಚನೆಗಳನ್ನು ತೀರ್ಮಾನಗಳು ಬರುವಂತೆ ಮಾಡಬೇಕು .ಕಷ್ಟ ನಷ್ಟಗಳನ್ನು ನಿಭಾಯಿಸಲು ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳು ನೀಡಬೇಕು.

ವಿದ್ಯುತ್ ಕಂಪನ ಚಿಕಿತ್ಸೆ : ಕೆಲವು ತೀವ್ರ ಪ್ರಕರಣಗಳಲ್ಲಿ ಆತ್ಮಹತ್ಯೆ ಅಪಾಯ ಹೆಚ್ಚಿರುವವರಲ್ಲಿ ವಾರಕ್ಕೆ ಮೂರು ಸಲ ವಿದ್ಯುತ್ ಕಂಪನ ಚಿಕಿತ್ಸೆ(E.C.T) ಸಹಾಯಕಾರಿ ಇದು ಸುರಕ್ಷಿತವಾದ ಚಿಕಿತ್ಸೆ.

ಖಿನ್ನತೆ ಇದ್ದಾಗ ಏನು ಮಾಡಬೇಕು, ಏನು ಮಾಡಬಾರದು ?

ಒಂಟಿಯಾಗಿರಬೇಡಿ ಆಪ್ತರು ಇಷ್ಟರ ಜೊತೆಯಲ್ಲಿ ಇರಿ

ಸುಮ್ಮನೆ ಕುಳಿತುಕೊಳ್ಳಬೇಡಿ ಉಪಯುಕ್ತವಾದ ಹಿತಕರವಾದ ಏನಾದರೂ ಚಟುವಟಿಕೆ ಕೆಲಸದಲ್ಲಿ ತೊಡಗಿಕೊಳ್ಳಿ. ಚಿಂತೆ ಮಾಡುವುದನ್ನು ನಿಲ್ಲಿಸಿ ನೀವು ಖಿನ್ನತೆಯಿಂದ ಹೊರ ಬರುವವರಿಗೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಡಿ, ಮನೆ ಉದ್ಯೋಗ ವ್ಯವಹಾರಗಳಲ್ಲಿ ಕುಟುಂಬದವರ ಸ್ನೇಹಿತ ಸಹದ್ಯೋಗಿಗಳ ಸಹಾಯ ಪಡೆಯಿರಿ

ಸಂಗೀತ, ಓದು, ಯೋಗ ಧ್ಯಾನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ

ಸ್ಥಳ ಬದಲಾವಣೆ ಬೇಕೆನಿಸಿದರೆ ಬಂಧು ಮಿತ್ರರ ಮನೆಗೆ ಪ್ರವಾಸಿ ಸ್ಥಳಗಳಿಗೆ ಹೋಗಿ ಬನ್ನಿ

ಬೇಸರ ದುಃಖ ಕಳೆಯುತ್ತದೆ ಚಿಂತೆ ಮರೆಸುತ್ತದೆ ಎಂದು ಧೂಮಪಾನ ಮದ್ಯಪಾನ ಮಾದಕ ವಸ್ತು ಸೇವನೆಯನ್ನು ಮಾಡಬೇಡಿ ಔಷಧಿಗಳನ್ನು ಕ್ರಮವಾಗಿ ಸೇವಿಸಿ ಬೇರೊಬ್ಬರು ನಿಮ್ಮ ಔಷದ ಸೇವನೆಯನ್ನು ಉಸ್ತುವಾರಿ   ಮಾಡಲಿ.

ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಹೆಚ್ಚು ದ್ರವ ಪದಾರ್ಥವನ್ನು ಸೇವಿಸಿ

ವಾಕಿಂಗ್ ವ್ಯಾಯಾಮ ಮಾಡಿ ಯಾವುದಾದರೂ ಆಟವನ್ನು ಆಡಿ *ಅವಧಿಗೊಂದು  ಸಲ (2,  ಅಥವಾ 4 ವಾರಗಳಿಗೊಮ್ಮೆ ) ವೈದ್ಯರನ್ನು ಕಾಣಿ.