ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದ್ದ ಯೋಗವು ತೂಕ ಇಳಿಸಿಕೊಳ್ಳಲು ಹಾಗೂ ದೇಹವನ್ನು ಸದೃಢವಾಗಿಡಲು ವ್ಯಾಯಾಮಕ್ಕಿಂತಲೂ ಹೆಚ್ಚು ಪರಿಣಾಮಕಾರಿ.
ಆಧುನಿಕ ವಿಜ್ಞಾನದೊಂದಿಗೆ ನಿಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಇದು ಇತರ ವಿಧದ ವ್ಯಾಯಾಮಕ್ಕಿಂತ ಹೆಚ್ಚಿನ ಆರೋಗ್ಯ ಲಾಭ ನೀಡುತ್ತದೆ. ಯೋಗ ಕೇವಲ ಆಸನ ಅಥವಾ ಭಂಗಿ ಮಾತ್ರವಲ್ಲ. ಕೆಲವೊಂದು ಯೋಗ ಮುದ್ರಗಳ ತಿಳುವಳಿಕೆ ಹೆಚ್ಚಿನವರಿಗಿಲ್ಲ. ಯೋಗ ಮುದ್ರಾಗಳಿಂದ ಸಿಗುವ ಆರೋಗ್ಯ ಲಾಭವು ನಿಮನ್ನು ಅಚ್ಚರಿಗೀಡುಮಾಡುತ್ತದೆ. ಪ್ರತಿಯೊಂದು ಯೋಗ ಮುದ್ರವು ವಿಶೇಷವಾದಂತಹದ್ದು ಮತ್ತು ಅದನ್ನು ಸರಿಯಾದ ವಿಧಾನದ ಮೂಲಕ ಅಭ್ಯಾಸ ಮಾಡಬೇಕು.
ಈ ಎಲ್ಲಾ ಯೋಗ ಮುದ್ರಗಳಿಗೆ ಆಂತರಿಕ ಅರ್ಥವಿದೆ.
ಉದಾಹರಣೆಗೆ ಇದರಲ್ಲಿ ಜ್ಞಾನ ಮುದ್ರಾ ಸಾಮಾನ್ಯವಾದದ್ದು. ಇದು ಜ್ಞಾನ ಮತ್ತು ಏಕಾಗ್ರತೆಯದ್ದಾಗಿದೆ. ಅದೇ ರೀತಿ ವಾಯು ಮುದ್ರಾ ಎಂದರೆ ಗಾಳಿ ಮತ್ತು ದೇಹದಲ್ಲಿನ ಗಾಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವುದು. ಎಲ್ಲಾ ಯೋಗ ಮುದ್ರಾಗಳು ಕೈ ಸನ್ನೆಗಳಾಗಿದ್ದು, ಇದು ಅದ್ಭುತ ಆರೋಗ್ಯ ಲಾಭವನ್ನು ನೀಡುತ್ತದೆ. ಇದನ್ನು ಏಕಾಂತದಲ್ಲಿ ಮಾಡುವಂತಿಲ್ಲ. ಈ ಮುದ್ರಾಗಳನ್ನು ಅಭ್ಯಸಿಸಲು ಅದರದ್ದೇ ಆದ ಸಮಯವಿದೆ.
ಕೆಲವೊಂದು ಸಾಮಾನ್ಯ ಯೋಗ ಮುದ್ರಾಗಳು ಮತ್ತು ಅದರಿಂದ ನಿಮ್ಮ ದೇಹಕ್ಕಾಗುವ ಆರೋಗ್ಯ ಲಾಭಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಸಾಮಾನ್ಯ ಯೋಗ ಮುದ್ರಾಗಳು
- ಜ್ಞಾನ ಮುದ್ರಾ
ಇದು ಜ್ಞಾನ ಮತ್ತು ಏಕಾಗ್ರತೆಗೆ ಇರುವ ಅತ್ಯಂತ ಸಾಮಾನ್ಯ ಯೋಗ ಮುದ್ರಾ. ಪದ್ಮಾಸನ ಹಾಕಿಕೊಂಡು ಬೆಳಗ್ಗೆ ಈ ಮುದ್ರಾವನ್ನು ಮಾಡಬೇಕು. ಇದು ಏಕಾಗ್ರತೆ ಹೆಚ್ಚಿಸುತ್ತದೆ, ನಿದ್ರಾಹೀನತೆ ಪರಿಹರಿಸುತ್ತದೆ ಮತ್ತು ಕೋಪದ ಸಮಸ್ಯೆ ನಿಭಾಯಿಸಲು ನೆರವಾಗುತ್ತದೆ. ಆಲಂ ಕಲ್ಲಿನ ಬಗ್ಗೆ ಗೊತ್ತೇ? ಇದನ್ನು ಬಳಸಿದರೆ ಆರೋಗ್ಯ ವೃದ್ಧಿ, ಸೌಂದರ್ಯ ವೃದ್ಧಿ
- ವಾಯು ಮುದ್ರಾ
ಈ ಮುದ್ರಾವು ನಿಮ್ಮ ದೇಹದ ಗಾಳಿಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಈ ಮುದ್ರಾವನ್ನು ನಿಂತು, ಕುಳಿತು ಅಥವಾ ಮಲಗಿ ದಿನದ ಯಾವುದೇ ಸಮಯದಲ್ಲೂ ಮಾಡಬಹುದು. ಇದು ದೇಹದಲ್ಲಿರುವ ಹೆಚ್ಚುವರಿ ಗಾಳಿಯನ್ನು ಹೊರಹಾಕಿ ಗ್ಯಾಸ್ ನಿಂದ ಉಂಟಾಗುವ ಎದೆನೋವನ್ನು ಕಡಿಮೆ ಮಾಡುತ್ತದೆ.