ಮನೆ ಕ್ರೀಡೆ ಕಾಮನ್‌ವೆಲ್ತ್‌ ಕ್ರೀಡಾಕೂಟ: ಘಾನಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಗೆಲುವು

ಕಾಮನ್‌ವೆಲ್ತ್‌ ಕ್ರೀಡಾಕೂಟ: ಘಾನಾ ವಿರುದ್ಧ ಭಾರತ ಹಾಕಿ ತಂಡಕ್ಕೆ ಗೆಲುವು

0
https://www.youtube.com/channel/UCmDoYGj_oDaxpT_t7Pa9iEQ

ಬರ್ಮಿಂಗ್‌ಹ್ಯಾಂ (Birmingham): ಇಂದಿನಿಂದ ಪ್ರಾರಂಭವಾಗಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಹಾಕಿ ತಂಡ ಗೆಲುವು ಸಾಧಿಸಿದೆ.

ಘಾನಾ ವಿರುದ್ಧ ಭಾರತ ತಂಡವು 5–0 ಅಂತರದ ಗೆಲುವು ದಾಖಲಿಸಿದೆ. ಗುರ್ಜಿತ್ ಕೌರ್, ಸಂಗೀತ ಕುಮಾರಿ, ಸಾಲಿಮಾ ತೇತೆ ಅವರು ಭಾರತದ ಪರ ಗೋಲು ಬಾರಿಸಿದರು.

ಇದರೊಂದಿಗೆ, ಭಾರತ ತಂಡವು 16 ವರ್ಷಗಳ ಬಳಿಕ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಜಯಿಸುವ ಭರವಸೆ ಮೂಡಿಸಿದೆ. 2006ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಜಯಿಸಿತ್ತು.