ಮನೆ ರಾಜ್ಯ ಕೃಷಿ ಸಚಿವರ ವಿರುದ್ಧ ದೂರು: ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಸರ್ಕಾರದ ತೀರ್ಮಾನ

ಕೃಷಿ ಸಚಿವರ ವಿರುದ್ಧ ದೂರು: ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ಸರ್ಕಾರದ ತೀರ್ಮಾನ

0

ಬೆಂಗಳೂರು: ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ರಾಜ್ಯಪಾಲರಿಗೆ ಬರೆದಿದ್ದ ಪತ್ರ ನಕಲಿ ಎಂದು ಹೇಳಲಾಗಿದ್ದು, ಏಳು ಜನರ ಸಹಿಯನ್ನು ಒಬ್ಬರೇ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿರುವುದರಿಂದ ಸಿಐಡಿಗೆ ಕೊಡಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

ಪತ್ರದಲ್ಲಿ ಜನತಾದಳದ ಹಾಗೂ ಕುಮಾರಸ್ವಾಮಿ ಹೆಸರು ಪ್ರಸ್ತಾಪ ಇರುವುದರಿಂದ ಹೆಚ್ಚಿನ ತನಿಖೆಯ ಅಗತ್ಯ ಇದೆ ಎಂದು ಮೂಲಗಳು ಹೇಳುತ್ತವೆ.

ಮಂಡ್ಯದಲ್ಲಿ ದೂರು ದಾಖಲಾಗಿದ್ದು ಎಫ್ ಐಆರ್ ಮಾಡಲಾಗಿದೆ.