ಮನೆ ರಾಜ್ಯ ಸ್ವಪಕ್ಷದ ಮುಖಂಡನ ವಿರುದ್ಧವೇ ದೂರು – ನ್ಯಾಯಕ್ಕಾಗಿ ಮೋದಿ ಕಚೇರಿ ಕದ ತಟ್ಟಿದ ಕಾಂಗ್ರೆಸ್ ನಾಯಕಿ

ಸ್ವಪಕ್ಷದ ಮುಖಂಡನ ವಿರುದ್ಧವೇ ದೂರು – ನ್ಯಾಯಕ್ಕಾಗಿ ಮೋದಿ ಕಚೇರಿ ಕದ ತಟ್ಟಿದ ಕಾಂಗ್ರೆಸ್ ನಾಯಕಿ

0

ಚಿಕ್ಕಮಗಳೂರು : ಸ್ವಪಕ್ಷದ ಮುಖಂಡನ ವಿರುದ್ಧ ಹಲ್ಲೆ ಆರೋಪ ಹೊರಿಸಿರುವ ಕಾಂಗ್ರೆಸ್ ನಾಯಕಿಯೊಬ್ಬರು ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಕದ ತಟ್ಟಿದ್ದಾರೆ. ಚಿಕ್ಕಮಗಳೂರು ನಗರದ ಕಾಂಗ್ರೆಸ್ ನಾಯಕಿ ಚೇತನಾ ಎಂಬವರು ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಷರೀಫ್ ವಿರುದ್ಧ ದೂರು ನೀಡಿದ್ದಾರೆ.

ಚೇತನಾ ಮನೆ ಬಳಿ ಹೋಗಿ ರಾಹಿಲ್ ಮಚ್ಚಿನಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಚೇತನಾ ಅವರ ಗಂಡನ ಕೈಗೆ ಗಾಯವಾಗಿ, ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಹಿಲ್ ಷರೀಫ್ ಅಪಾರ್ಟ್ಮೆಂಟ್‌ನಲ್ಲಿ ಮಹಿಳೆ ಜೊತೆಗಿದ್ದ ಫೋಟೋ ವೈರಲ್ ಆಗಿತ್ತು. ಆ ಅಪಾರ್ಟ್ಮೆಂಟ್ ಚೇತನಾ ಅವರದ್ದಾಗಿದ್ದು, ಇದೇ ಷರೀಫ್‌ನಿಂದ ಬಾಡಿಗೆ ಪಡೆದು ನಡೆಸುತ್ತಿದ್ದರು.

ಹಿಂದೂ ಮಹಿಳೆ ಜೊತೆ ಅದೇ ಅಪಾರ್ಟ್ಮೆಂಟ್‌ನಲ್ಲಿದ್ದ ಫೋಟೋ ವೈರಲ್ ಆಗಿತ್ತು. ಚೇತನಾ ಅವರೇ ಫೋಟೋ ವೈರಲ್ ಮಾಡಿರೋದು ಎಂದು ಮನೆ ಬಳಿ ಹೋಗಿ ಮಚ್ಚು ಬೀಸಿದ್ದ. ಈ ಸಂಬಂಧ ದೂರು ನೀಡಿದರೂ ಕ್ರಮವಿಲ್ಲ ಎಂದು ಇದೀಗ ನ್ಯಾಯಕ್ಕಾಗಿ ಪ್ರಧಾನಿಗೆ ಪತ್ರ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಸಚಿವಾಲಯ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೇರಿ ಹಲವರಿಗೆ ಕಾಂಗ್ರೆಸ್ ನಾಯಕಿ ಪತ್ರ ಬರೆದು ನ್ಯಾಯ ಕೋರಿದ್ದಾರೆ.

ಆತನ ಮೊಬೈಲ್‌ನಲ್ಲಿ ಹಿಂದೂ ಹೆಣ್ಣುಮಕ್ಕಳ ಜೊತೆಗಿರುವ ಫೋಟೋಗಳಿವೆ. ಹೆಣ್ಣುಮಕ್ಕಳ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾನೆ ಎಂದು ದೂರಿದ್ದಾರೆ. ಆತ ಎಲ್ಲರಿಂದ ರಕ್ಷಣೆಗೆ ಒಳಗಾಗಿದ್ದಾನೆ. ಯಾವುದೇ ಕ್ರಮವಾಗುತ್ತಿಲ್ಲ. ತಿಂಗಳ ಅಂತರದಲ್ಲಿ 2 ಗಲಾಟೆ ಮಾಡಿಕೊಂಡಿದ್ದ ರಾಹಿಲ್. 2 ಗಲಾಟೆ ಹಿಂದೂಗಳ ಮನೆಯಲ್ಲೇ ಆಗಿದೆ. ಸದ್ಯ ಈ ಎಲ್ಲಾ ಬೆಳವಣಿಗೆ ಮಧ್ಯೆ ರಾಹಿಲ್ ಷರೀಫ್ ಕಾಂಗ್ರೆಸ್ಸಿನಿಂದ ಉಚ್ಚಾಟನೆ ಆಗಿದ್ದಾನೆ.