ಮನೆ ಸುದ್ದಿ ಜಾಲ ಅವಾಚ್ಯ ಶಬ್ದಗಳಿಂದ ನಿಂದನೆ ಕೊಲೆ ಬೆದರಿಕೆ ಗ್ರಾಪಂ ಸದಸ್ಯನ ವಿರುದ್ಧ ದೂರು ದಾಖಲು

ಅವಾಚ್ಯ ಶಬ್ದಗಳಿಂದ ನಿಂದನೆ ಕೊಲೆ ಬೆದರಿಕೆ ಗ್ರಾಪಂ ಸದಸ್ಯನ ವಿರುದ್ಧ ದೂರು ದಾಖಲು

0

ಪಿರಿಯಾಪಟ್ಟಣ:ಗ್ರಾಮ ಪಂಚಾಯತಿ ಸದಸ್ಯರೋರ್ವರು ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪಿಡಿಒ ನೀಡಿದ ದೂರಿನ ಆಧಾರದ ಮೇಲೆ ಬೈಲು ಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಆವರ್ತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಭಿ ಅಹಮದ್ ಎಂಬುವವರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇ- ಆಫೀಸ್ ತರಬೇತಿಗಾಗಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ಹಾಜರಾಗಿದ್ದ ಸಂದರ್ಭದಲ್ಲಿ ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿನ ಮುಳುಸೋಗೆ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಎಂ.ಬಿ.ಶಿವಕುಮಾರ್ ಎಂಬುವವರು ಪಿಡಿಒ ಅಭಿ ಅಹಮದ್ ಎಂಬುವವರಿಗೆ ಹಿಂಬರಹ ಕೊಡುವ ವಿಚಾರವಾಗಿ ದೂರವಾಣಿ ಕರೆ ಮಾಡಿ ತಕ್ಷಣವೇ ಹಿಂಬರಹ ಕೊಡಿ ಇಲ್ಲವಾದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿಗೆ ಬಂದು ಹೊಡೆಯುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ತಾಲೂಕಿನ ಬೈಲು ಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ: ಈ ಘಟನೆ ಕುರಿತು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪಿರಿಯಾಪಟ್ಟಣ ತಾಲ್ಲೂಕು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿ, ಗ್ರಾಮ ಪಂಚಾಯಿತಿಯಲ್ಲಿ ಕೇವಲ 3 ಜನ ಮಾತ್ರ ನೌಕರಿದ್ದು, ಮನರೇಗಾ, ಸ್ವಚ್ಛ ಭಾರತ್ ಮಿಷನ್, ವಸತಿ ಯೋಜನೆ, 15 ನೇ ಹಣಕಾಸು ಯೋಜನೆ, ಈ ಸ್ವತ್ತು, ತೆರಿಗೆ ವಸೂಲಿ, ಬೆಳೆ ಸಮೀಕ್ಷೆ, ಈ ಜನ್ಮ, ಮಿಷನ್ ಅಂತ್ಯೋದಯ, ಜಿಪಿಡಿಪಿ, ಐಪಿಎಎಪಿ, ನಂತಹ ಯೋಜನೆಗಳನ್ನು ಸಕಾಲದಲ್ಲಿ ಕಾನೂನಿನ ಚೌಕಟ್ಟಿನೊಳಗೆ ಅನುಷ್ಠಾನಗೊಳಿಸಬೇಕಾಗಿದ್ದು ಐಪಿ ಜಿ ಆರ್ ಎಸ್ ಸಕಾಲ ಅರ್ಜಿಗಳ ವಿಲೇವಾರಿ ಆರ್‌ಟಿಐ, ಮಾಹಿತಿಗಳನ್ನು ನೀಡುವಿಕೆ ಹಾಗೂ ಸದರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸುಮಾರು 33ಕ್ಕೂ ಹೆಚ್ಚು ತಂತ್ರಾಂಶಗಳಲ್ಲಿ ಅಂತರ್ಜಾಲ ಸಮಸ್ಯೆಯೊಂದಿಗೆ ನಿಗದಿತ ಕಾಲಮಿತಿಯೊಳಗೆ ಕಾರ್ಯ ನಿರ್ವಹಿಸಬೇಕಾಗಿರುತ್ತದೆ, ಇದರೊಂದಿಗೆ ವಾಟ್ಸಾಪ್ಗಳು ಪ್ರತಿ ಕಂದಾಯ ಗ್ರಾಮಗಳಲ್ಲಿ ಗ್ರಾಮ ಸಭೆಗಳು, ವಿಶೇಷ ಗ್ರಾಮ ಸಭೆಗಳು, ಸಾಮಾಜಿಕ ಪರಿಶೋಧನಾ ಗ್ರಾಮಸಭೆಗಳು, ಜಮಬಂದಿ ಗ್ರಾಮ ಸಭೆ, ಕೆಡಿಪಿ ಸಭೆಗಳು, ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆ ವಿಶೇಷ ಸಭೆಗಳು, ವಿವಿಧ ಜಯಂತಿಗಳು ಒಳಗೊಂಡಂತೆ ಒತ್ತಡದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಿ ಒತ್ತಡದಲ್ಲಿ ಕೆಲಸ ನಿರ್ವಹಿಸುವ ನಮ್ಮೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರವಾಗಿ ಕಾನೂನು ಚೌಕಟ್ಟಿಗೆ ಕರ್ತವ್ಯ ನಿರ್ವಹಿಸಲು ಸರ್ಕಾರಿ ನೌಕರರಿಗೆ ಸಹಕಾರಿ ನೀಡಬೇಕಾಗಿರುತ್ತದೆ ಆದರೆ ಬಿ ಎಂ ಶಿವಕುಮಾರ್ ಇದಕ್ಕೆ ವ್ಯತಿರಿಕ್ತವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತರಬೇತಿ ಸಮಯದಲ್ಲಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯನ್ನು ಹಾಕಿ ಗೂಂಡಾ ವರ್ತನೆ ತೋರುತ್ತಿರುವುದು ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸಲು ಭಯದ ವಾತಾವರಣ ಸೃಷ್ಟಿಯಾಗಿ ಕರ್ತವ್ಯ ನಿರ್ವಹಿಸಲು ಮಾನಸಿಕವಾಗಿ ತೊಂದರೆಯಾಗಿದೆ, ಸರ್ಕಾರಿ ನೌಕರರ ಆರೋಗ್ಯ ಮತ್ತು ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಆದ್ದರಿಂದ ಬಿಎಂ ಶಿವಕುಮಾರ್ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ಪಿಡಿಒಗಳ ಸಂಘದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೀರಭದ್ರಶೆಟ್ಟಿ, ಖಜಾಂಚಿ ಪರಮೇಶ್, ಪಿಡಿಒಗಳಾದ ಬೋರೇಗೌಡ, ಮಂಜುನಾಥ್, ಸುರೇಶ್, ಅಭಿ ಅಹಮದ್, ಅನಿಲ್ ಕುಮಾರ್, ಹರೀಶ್, ಗಣೇಶ್ ಸಿ.ಆರ್, ಪುಷ್ಪ ಬಾಯಿ, ಆಶಾ, ಸಂದೇಶ್, , ಕೆ.ಪಿ.ಚೇತನ್, ಮಧು,ಸೋಮಶೇಖರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.