ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ.
ಹುಟ್ಟೂರು ಸೊರಬದಲ್ಲಿ ಸತತ 7 ಬಾರಿ ಶಾಸಕರಾಗಿ ಎಸ್. ಬಂಗಾರಪ್ಪ ಮೆರೆದಿದ್ದರು. ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರದಲ್ಲಿಂದು ಬಂಗಾರಪ್ಪರವರ ಮಕ್ಕಳಿಬ್ಬರ ದಾಯಾದಿ ಕಲಹ ನಡೆಯುತ್ತಿದೆ.
ಈ ಕ್ಷೇತ್ರವು ಬಂಗಾರಪ್ಪ ಕುಟುಂಬದ ಕೈಯಲ್ಲಿಯೇ ಇದೆ. ಈಗ ಮೂರನೇ ಬಾರಿಗೆ ಅಣ್ಣ, ತಮ್ಮ ಪರಸ್ಪರ ಹೋರಾಟಕ್ಕೆ ನಿಂತಿದ್ದಾರೆ. ಈ ಹಿಂದಿನ ಅಣ್ಣ-ತಮ್ಮಂದಿರ ನಡುವಿನ ಎರಡೂ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪ ಗೆಲುವು ಸಾಧಿಸಿದ್ದರು. ಹಾಗೆಯೇ ಈಗಾಗಲೇ ಮೂರು ಬಾರಿ ಸೊರಬದಲ್ಲಿ ಕುಮಾರ್ ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಸುಮಾರು 13 ಸಾವಿರ ಮತಗಳಿಂದ ಕುಮಾರ ಬಂಗಾರಪ್ಪ ಗೆಲುವು ಸಾಧಿಸಿದ್ದರೆ, 2004ರಲ್ಲಿ ಸುಮಾರು 12 ಸಾವಿರ ಮತಗಳಿಂದ ವಿಜಯಿಯಾಗಿದ್ದರು.