ಕಲಬುರಗಿ: ಚುನಾವಣೆಯ ಫಲಿತಾಂಶದ ದಿನ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಕ್ಕೆ ಕೆಲ ಯುವಕರು ಮಚ್ಚು ಹಿಡಿದು ಕುಣಿದು ಸಂಭ್ರಮಿಸಿರುವ ಘಟನೆ ನಡೆದಿದೆ.
ಮೇ 13ರಂದು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಕಲಬುರಗಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಖನೀಜ್ ಫಾತಿಮಾ ಆಯ್ಕೆಯಾಗಿದ್ದಾರೆ.
ಹೀಗಾಗಿ ತಡ ರಾತ್ರಿ ಕಲಬುರಗಿ ನಗರದ ಕುಲಾಯಿಗಲ್ಲಿ ಬಡಾವಣೆಯ ಉಸ್ಮಾನ್ & ಬೆಂಬಲಿಗರು ಲಾಂಗು-ಮಚ್ಚು ಹಿಡಿದು ಕುಣಿದು ಕುಪ್ಪಳಿಸಿದ್ದಾರೆ.
ರಾತ್ರಿ ಹೊತ್ತು ಮಚ್ಚು ಲಾಂಗುಗಳಿಂದ ರಸ್ತೆ ಬದಿಯಲ್ಲಿ ಪುಂಡಾಟ ನಡೆಸಿರುವ ಬಗ್ಗೆ ಸ್ಥಳೀಯರು ಗರಂ ಆಗಿದ್ದು ವಿಡಿಯೋ ಹರಿದಾಡುತ್ತಿದೆ.
ಕಲಬುರಗಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Saval TV on YouTube