ಮನೆ ರಾಜ್ಯ ನಾಡುನುಡಿ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ:  ಸಚಿವ ಆರ್.ಅಶೋಕ್

ನಾಡುನುಡಿ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ:  ಸಚಿವ ಆರ್.ಅಶೋಕ್

0

ಬೆಂಗಳೂರು(Bengaluru): ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆಗೆ ಪಠ್ಯ ಬದಲಿಸಿದ್ರು. ನಾಡುನುಡಿ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ ಎಂದು ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದ್ದಾರೆ.

ಪಠ್ಯಪರಿಷ್ಕರಣೆ ಕುರಿತು ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬರಗೂರು ರಾಮಚಂದ್ರಪ್ಪ ಸಮಿತಿ ವಿರುದ್ಧ ವಾಗ್ದಾಳಿ ನಡೆಸಿದರು.

ಪಠ್ಯದ ಬಗ್ಗೆ ಇಷ್ಟು ಚರ್ಚೆಯಾಗುತ್ತಿರುವುದು ಇತಿಹಾಸದಲ್ಲೇ ಮೊದಲು. ಹಿಂದೆ ಸರ್ಕಾರಗಳು ಕೆಲ ಪಠ್ಯಗಳನ್ನ ತೆಗೆದು ಹಾಕಿವೆ.  ಇವರಿಗೆ ರಾಮ ಈಶ್ವರ ಹೆಸರು ಕೇಳಲು ಇಷ್ಟವಿಲ್ಲ ಎಂದು ಕಿಡಿಕಾರಿದರು.

ನಮ್ಮ ಸರ್ಕಾರ ಇದ್ದಾಗ ಕುವೆಂಪು ಅವರ 8 ಪಾಠ ಸೇರಿಸಿದ್ದೇವೆ.  ಆದರೆ ಕಾಂಗ್ರೆಸ್  ಅಲ್ಪ ಸಂಖ್ಯಾತರ ಓಲೈಕೆ ಮಾಡಲೆಂದೇ ಪಠ್ಯ ಬದಲಿಸಿದ್ದರು.  ಕಾಂಗ್ರೆಸ್ ಸರ್ಕಾರದಲ್ಲಿ ತಮಗೆ ಬೇಕಾದನ್ನ ತುರುಕಲಾಗಿತ್ತು. ಕುವೆಂಪು ಪದ್ಯ ತೆಗೆದು ಹಂಸಲೇಖ ಪದ್ಯ ಸೇರಿಸಿದ್ದರು. ಕುವೆಂಪು ಪಠ್ಯ ಕೈ ಬಿಟ್ಟಾಗ ಧರಣಿ ಮಾಡಲಿಲ್ಲ. ಕೆಂಪೇಗೌಡನ ಕನಸು ಎಂಬ ಅಧ್ಯಯನ ಸೇರ್ಪಡೆ  ಮಾಡಿದ್ದೇವೆ. ಆದರೆ ಕಾಂಗ್ರೆಸ್ ಕೆಂಪೇಗೌಡರ ಪಠ್ಯ ಯಾಕೆ ಸೇರಿಸಲಿಲ್ಲ ಎಂದು ಪ್ರಶ್ನಿಸಿದರು.

ಟಿಪ್ಪು ಅಂದ್ರೆ ಸಿದ್ದರಾಮಯ್ಯಗೆ ಮೈಮೇಲೆ ದೇವರು ಬರುತ್ತೆ.   ಟಿಪ್ಪು ವೈಭವೀಕರಿಸಿ ಮೈಸೂರು ರಾಜರನ್ನ ಕಡೆಗಣಿಸಿದ್ದರು. ಟಿಪ್ಪು ಬ್ರಿಟೀಷರ ವಿರುದ್ದ ಹೋರಾಡಿದ್ದು ಬಿಟ್ಟು ಬೇರೇನು ಮಾಡಿಲ್ಲ., ಅನೇಕರನ್ನು ಮತಾಂತರ ಮಾಡಿದ ಎಂದು ಹೇಳಿದರು.

ನಮ್ಮ ಬಾವುಟ ಮತ್ತು ಚೆಲುವ ಕನ್ನಡ ನಾಡಿದು ಪಠ್ಯಕ್ಕೆ ಕತ್ತರಿ ಹಾಕಿದ್ರು. ವಿಜಯನಗರ ಸಾಮ್ರಾಜ್ಯ ಪಠ್ಯ ತೆಗೆದರು. ನಾಡುನುಡಿ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದರು.