ಬೆಳಗಾವಿ(Belagavi): ವೀರ್ ಸಾವರ್ಕರ್ ಫೋಟೋ ಅನಾವರಣ ಮಾಡುವುದರಿಂದ ಕಾಂಗ್ರೆಸ್ ಗೆ ಏನ್ ಆಗುತ್ತದೆಯೋ ಗೊತ್ತಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಸಾವರ್ಕರ್ ಈ ದೇಶದ ಗೌರವಾನ್ವಿತ ವ್ಯಕ್ತಿ,ದೇಶಕ್ಕಾಗಿ ಹೋರಾಟ ಮಾಡಿದ ಯಶಸ್ಸು ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ನವ್ರು ಈಗಾಗಲೇ ವಿವೇಚನಾರಹಿತವಾದಂತಹ ವಿಚಾರಗಳನ್ನ ಪ್ರಸ್ತಾಪಿಸಿ, ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲದೇ ದೇಶದಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸಿದ್ದಾರೆ. ಈಗಲೂ ಅವರಿಗೆ ಬುದ್ದಿ ಬಂದಿಲ್ಲ ಅಂದ್ರೆ ಜನರೇ ತಿರ್ಮಾನ ಮಾಡುತ್ತಾರೆ ಎಂದರು.
ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸೇರಿದಂತೆ ಇನ್ನೂ ಹಲವು ನಾಯಕರ ಫೋಟೋ ಹಾಕುತ್ತೇವೆ, ಬಸವಣ್ಣನವರ ಬಗ್ಗೆ ಕಾಂಗ್ರೆಸ್ ನಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಜನರು ಕಾಂಗ್ರೆಸ್’ನ್ನು ತಿರಸ್ಕರ ಮಾಡಿದ್ದಕ್ಕೆ ಅವರು ಬೀದಿಗೆ ಬಿದ್ದಿದ್ದಾರೆ. ಅವರ ಪಾಲಿಗೆ ಇರುವಂತದ್ದು, ಬೀದಿ ಹೋರಾಟ. ಅವರಿಗೆ ಅಧಿಕಾರ ನಡೆಸಲು ಈ ದೇಶನ ಜನ ಒಪ್ಪುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ವೋಟ್’ಗಳನ್ನು ತೆಗೆದು ಹಾಕಲು ಕಾಂಗ್ರೆಸ್’ನವರು ಹುನ್ನಾರ ನಡೆಸುತ್ತಿದ್ದಾರೆ. ಈಗಾಗಲೇ ನನ್ನ ಮತ ಕ್ಷೇತ್ರದ ಕೆಲ ಹಳ್ಳಿಗಳಿಂದಲೂ ಈಗಾಗಲೇ ದೂರುಗಳು ಬಂದಿವೆ. ಈ ರೀತಿಯಾದ ವೋಟ್ ಗಳನ್ನ ತೆಗೆದು ಹಾಕುವ ನಿಟ್ಟಿನಲ್ಲಿ ಎಲ್ಲಾ ಕಡೆ ಗದ್ದಲವನ್ನು ಮಾಡುತ್ತಿದ್ದಾರೆ. ಈ ರೀತಿ ಸ್ವಾತಂತ್ರ್ಯ ನಂತರದ ಮಾಡಿರುವ ಅಪರಾಧದ ಹಿನ್ನೆಲೆಯಿಂದಲೇ ಕಾಂಗ್ರೆಸ್’ನ್ನು ದೇಶದಲ್ಲಿ ತಿರಸ್ಕರಿಸಿದ್ದಾರೆ ಎಂದರು.