ಮುಜಾಫರ್ಪು : ಮತಗಳಿಗಾಗಿ ಛಾತಿ ಮೈಯ್ಯಾಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಮಹಿಳೆಯರು ಒಂದು ಗುಟುಕು ನೀರು ಕುಡಿಯದೆ, ದೀರ್ಘ ಉಪವಾಸ ಆಚರಿಸಿ ಗಂಗಾನದಿಯಲ್ಲಿ ಸೂರ್ಯದೇವನಿಗೆ ಅರ್ಘ್ಯ ಅರ್ಪಿಸುತ್ತಾರೆ.
ಇದು ಕಾಂಗ್ರೆಸ್ಗೆ ನಾಟಕದಂತೆ ಕಾಣುತ್ತಾ ಎಂದು ಮೋದಿ ಪ್ರಶ್ನಿಸಿದ್ದಾರೆ. ಬಿಹಾರದ ತಾಯಂದಿರು, ಸಹೋದರಿಯರು ಛಾತಿ ಮೈಯಾಗೆ ಆದ ಅವಮಾನವನ್ನು ಸಹಿಸಿಕೊಳ್ಳುತ್ತಾರಾ ಖಂಡಿತವಾಗಿಯೂ ಇಲ್ಲ ಎಂದರು.
ಪ್ರಧಾನಿ ಮೋದಿಯವರಿಗೆ ನಿಮ್ಮ ಮತ ಮಾತ್ರ ಬೇಕು. ನೀವೇನಾದರೂ ಮತಗಳಿಗಾಗಿ ಬದಲಾಗಿ ಡ್ಯಾನ್ಸ್ ಮಾಡಲು ಹೇಳಿದರೆ ಮೋದಿ ವೇದಿಕೆಯಲ್ಲಿ ನೃತ್ಯ ಕೂಡ ಮಾಡುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ರಾಹುಲ್ ಗಾಂಧಿ ಇದೇ ಪ್ರದೇಶದಲ್ಲಿ ನಿನ್ನೆ ಪ್ರಚಾರ ನಡೆಸಿ ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದರು. ರಾಹುಲ್ ಗಾಂಧಿ ಇಂದು ಬಿಹಾರದಲ್ಲಿ ಚುನಾವಣಾ ಪ್ರಚಾರವನ್ನು ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿಕೊಂಡು ಕೆಲವು ಹೇಳಿಕೆಗಳನ್ನು ನೀಡಿದ್ದರು.















