ಮನೆ ಸುದ್ದಿ ಜಾಲ ತನ್ನ ಪಾಲಿನ ಹಣ ಕೊಡೋಕಾಗದೆ ವಿಬಿ-ಜಿ ರಾಮ್-ಜಿ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ – ರೇಣುಕಾಚಾರ್ಯ

ತನ್ನ ಪಾಲಿನ ಹಣ ಕೊಡೋಕಾಗದೆ ವಿಬಿ-ಜಿ ರಾಮ್-ಜಿ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ – ರೇಣುಕಾಚಾರ್ಯ

0

ದಾವಣಗೆರೆ : ವಿಬಿ-ಜಿ ರಾಮ್-ಜಿ ಯೋಜನೆಗೆ ತನ್ನ ಪಾಲಿನ ಹಣ ಕೊಡೋಕಾಗದೇ ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಆರೋಪಿಸಿದ್ದಾರೆ. ಹೊನ್ನಾಳಿಯಲ್ಲಿ ವಿಬಿ-ಜಿ ರಾಮ್-ಜಿ ಯೋಜನೆ ಪರ ನಡೆದ ಜನಜಾಗೃತಿ ಜಾಥದಲ್ಲಿ ಅವರು ಮಾತನಾಡಿದರು.

ಈ ವೇಳೆ, ವಿಬಿ-ಜಿ ರಾಮ್-ಜಿ ಬಗ್ಗೆ ಕಾಂಗ್ರೆಸ್‌ ನಾಯಕರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ದೇಶದ ಮೂಲ ನಿರ್ಮಾಣವೇ ವಿಬಿ-ಜಿ ರಾಮ್ -ಜಿ ಮೂಲ ಆಶಯವಾಗಿದೆ. ಆದರೆ ತನ್ನ ಪಾಲಿನ ಹಣ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನ್ಯಾಮತಿ ಹಾಗೂ ಹೊನ್ನಾಳಿ ತಾಲೂಕಿನಾದ್ಯಂತ ಜನಜಾಗೃತಿ ಜಾಥಾ ನಡೆಯುತ್ತಿದೆ. ತಾಲೂಕಿನ ಪ್ರಮುಖ ಸ್ಥಳಗಳಾದ ಹಿರೇಗೋಣಿಗೆರೆ, ಬೆಲ್ಲಿಮಲ್ಲೂರು, ಕುಂದೂರು, ಬೆಳಗುತ್ತಿ ಗ್ರಾಮ ಸೇರಿದಂತೆ ವಿವಿಧಡೆ ಜಾಥಾ ನಡೆಸಲಾಗುತ್ತಿದೆ.