ಮನೆ ರಾಜ್ಯ ತುಮಕೂರು ನಗರ, ಗ್ರಾಮಾಂತರದಲ್ಲಿ ಕಾಂಗ್ರೆಸ್, ಜೆಡಿಎಸ್ ನಾಮಪತ್ರ ಸಲ್ಲಿಕೆ

ತುಮಕೂರು ನಗರ, ಗ್ರಾಮಾಂತರದಲ್ಲಿ ಕಾಂಗ್ರೆಸ್, ಜೆಡಿಎಸ್ ನಾಮಪತ್ರ ಸಲ್ಲಿಕೆ

0

ತುಮಕೂರು: ನಗರ ಹಾಗೂ ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ತಮ್ಮ ಶಕ್ತಿ ಪ್ರದರ್ಶಿಸಿದರು.

Join Our Whatsapp Group

ಎರಡು ಪಕ್ಷಗಳ ಕಾರ್ಯಕರ್ತರ ಮೆರವಣಿಗೆ ನಗರದ ಟೌನ್‌ ಹಾಲ್ ವೃತ್ತಕ್ಕೆ ಒಮ್ಮೆಲೆ ಬಂದು ಸೇರಿತು. ಕೆಲ ಹೊತ್ತು ಎರಡು ಪಕ್ಷಗಳ ಕಾರ್ಯಕರ್ತರು ಒಗ್ಗೂಡಿದಂತೆ ಕಂಡು ಬಂತು. ತಮ್ಮ ಅಭ್ಯರ್ಥಿ, ಪಕ್ಷದ ಪರ ಘೋಷಣೆ ಮೊಳಗಿಸಿದರು.

ಎರಡು ಪಕ್ಷದ ಕಾರ್ಯಕರ್ತರು ಒಗ್ಗೂಡಿದ್ದರಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಕಾಂಗ್ರೆಸ್‌ ನವರು ಒಂದು ಕಡೆ ತೆರಳಿದರೆ, ಜೆಡಿಎಸ್‌’ನವರು ಮತ್ತೊಂದು ರಸ್ತೆಯಲ್ಲಿ ಸಾಗಿದರು.

ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಕ್ಬಾಲ್ ಅಹ್ಮದ್, ಜೆಡಿಎಸ್ ಅಭ್ಯರ್ಥಿಯಾಗಿ ಎನ್.ಗೋವಿಂದರಾಜು ನಾಮಪತ್ರ ಸಲ್ಲಿಸಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಸಿ.ಗೌರಿಶಂಕರ ಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಷಣ್ಮುಖಪ್ಪ ನಾಮಪತ್ರ ಹಾಕಿದರು.

ಹಿಂದಿನ ಲೇಖನವಿಧಾನಸಭೆ ಚುನಾವಣೆ: ಜೆಡಿಎಸ್‌ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ
ಮುಂದಿನ ಲೇಖನಮೈಸೂರು: ನಿಷೇಧಿತ ಪ್ರದೇಶದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಸಾವು