ಮನೆ ರಾಜಕೀಯ ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಆತಂಕ ಶುರು: ಬಿ.ವೈ. ವಿಜಯೇಂದ್ರ

ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಆತಂಕ ಶುರು: ಬಿ.ವೈ. ವಿಜಯೇಂದ್ರ

0

ಬೆಂಗಳೂರು: ಶಿಗ್ಗಾವಿಯಲ್ಲಿ ಬಿಜೆಪಿ ಗೆದ್ದಾಗಿದೆ ಎಂಬ ವಾತಾವರಣವಿದೆ. ಇನ್ನು ಚನ್ನಪಟ್ಟಣ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದರು. ಆದರೆ, ಚನ್ನಪಟ್ಟಣ ಕ್ಷೇತ್ರ ಕೈಜಾರಿ ಹೋಗುತ್ತಿದೆ. ಅದು ಕಾಂಗ್ರೆಸ್​ನವರಿಗೂ ಗೊತ್ತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

Join Our Whatsapp Group

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಂಡೂರು, ಚನ್ನಪಟ್ಟಣದಲ್ಲಿ ಬಿಜೆಪಿ ಕೈ ಮೇಲಾಗುತ್ತಿದೆ. ಹಾಗಾಗಿ, ಸಿಎಂ ಸಿದ್ದರಾಮಯ್ಯ ಅವರು ಸಂಡೂರು ಕ್ಷೇತ್ರದ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ವಕ್ಫ್ ವಿಚಾರ, ಇವರ ರೈತ ವಿರೋಧಿ ಧೋರಣೆಗಳು, ಹಿಂದೂ ವಿರೋಧಿ ನಡವಳಿಕೆಗಳಿಂದ ಉಪಚುನಾವಣೆ ಮೇಲೆ ಪರಿಣಾಮ ಬೀರಿವೆ. ಮೂರು ಕ್ಷೇತ್ರಗಳಲ್ಲೂ ಎನ್‌ಡಿಎ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೇಳಿಕೆಯನ್ನು ಖಂಡಿಸಿದ ವಿಜಯೇಂದ್ರ ಅವರು, ಅಧಿಕಾರದ ದರ್ಪ ಅವರಿಗೆ ಈ ರೀತಿ ಮಾತನಾಡಿಸಿದೆ. ಜಯನಗರದ ಜನ ಏನು ತಪ್ಪು ಮಾಡಿದ್ದಾರೆ. ಅಲ್ಲಿ ನಮ್ಮ (ಬಿಜೆಪಿ) ಶಾಸಕರು ಇದ್ದಾರೆ. ಅವರು ತಗ್ಗಿ ಬಗ್ಗಿ‌ ನಡೆಯಬೇಕಾ? ನಾವೇನು ಪ್ರಜಾಪ್ರಭುತ್ವದಲ್ಲಿ ಇದ್ದಿವೋ? ಇಲ್ಲ ಸರ್ವಾಧಿಕಾರಿ ಆಡಳಿತದಲ್ಲಿ ಇದ್ದೀವೋ? ಕ್ಷೇತ್ರದ ಶಾಸಕರಿಗಷ್ಟೇ ಅಲ್ಲ ಮತದಾರರಿಗೆ ಅವಮಾನ ಮಾಡಿದಂತೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರ ಶಾಶ್ವತವಾಗಿರಲ್ಲ. ಅವರಿಗೆ ತಮ್ಮ ಮಾತಿನ ಮೇಲೆ ಹಿಡಿತ ಇರಲಿ. ವಿಪಕ್ಷ ಶಾಸಕರ ಮೇಲೆ ದಬ್ಬಾಳಿಕೆ ಸಹಿಸುವುದಿಲ್ಲವೆಂದು ಡಿಕೆಶಿ ಕೊಟ್ಟಿರುವ ರೀತಿಯ ಹೇಳಿಕೆ ಕೊಡುವುದನ್ನು ಮೊದಲು ನಿಲ್ಲಿಸಲಿ ಎಂದು ಹೇಳಿದರು.

ಮೂರೂವರೆ ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಟಾಂಗ್ ನೀಡಿದ ವಿಜಯೇಂದ್ರ, ಶಾಸಕರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನವದು. ಈಗಾಗಲೇ ಸಿಎಂ ರಾಜೀನಾಮೆ ನಿಗದಿಯಾಗಿದೆ. ಅದು ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೊತ್ತಿದೆ ಎಂದರು.

ವಕ್ಫ್ ನೋಟಿಸ್ ವಾಪಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಮಣ್ಣು ತಿನ್ನುವ ಕೆಲಸ ಯಾಕೆ ಮಾಡಬೇಕು. ರೈತರ ಆಸ್ತಿ ಕಬಳಿಸಲು ಯಾಕೆ‌ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಬಿಟ್ಟರು. ಜಮೀರ್ ಅವರಿಗೆ ಸಿಎಂ ಗುತ್ತಿಗೆ ಯಾಕೆ ಕೊಡಬೇಕಿತ್ತು. ಹಾವೇರಿಯಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆಗಾರರು? ಸರ್ಕಾರ ರೈತರ ಜೀವನಕ್ಕೆ ಕೊಳ್ಳಿ ಇಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.