ನವದೆಹಲಿ(New delhi): ಕಾಂಗ್ರೆಸ್ ಪಕ್ಷಕ್ಕೆ ಹಾರೈಕೆಗಳಿಂತ ಔಷಧಿಗಳ ಅಗತ್ಯವಿದೆ. ಈ ಔಷಧಿಗಳನ್ನು ವೈದ್ಯರ ಬದಲಿಗೆ, ಕಾಂಪೌಂಡರ್‌ಗಳು ಕಾಂಗ್ರೆಸ್‌ಗೆ ನೀಡುತ್ತಿದ್ದಾರೆ ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪಕ್ಷವನ್ನು ಸಂಘಟಿಸಲು ನಾಯಕರಿಗೆ ಸಮಯವಿಲ್ಲ. ಪಕ್ಷದ ನಾಯಕರು ಸದಸ್ಯರನ್ನು ಒಗ್ಗೂಡಿಸುವ ಬದಲು, ಪಕ್ಷವನ್ನು ತೊರೆಯುವಂತೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಪ್ರಯೋಜನವಾಗದ ಕಾರಣ ಬಿಜೆಪಿಗೆ ಸೇರುವುದಿಲ್ಲ. ವಿಧಾನಸಭಾ ಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗಬಹುದು. ಆ ಕಾರಣದಿಂದ ಶೀಘ್ರದಲ್ಲೇ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಅವರು ಹೇಳಿದ್ದಾರೆ.
ಪಕ್ಷದ ತಳಹದಿಯೇ ದುರ್ಬಲಗೊಂಡಿದ್ದು, ಸಂಘಟನೆ ಯಾವಾಗ ಬೇಕಾದರೂ ಕುಸಿಯಬಹುದು. ಅದಕ್ಕಾಗಿಯೇ ಕೆಲವು ಮುಖಂಡರ ಜತೆ ಸೇರಿ ಕಾಂಗ್ರೆಸ್ ಅನ್ನು ತೊರೆಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.