ಮನೆ ರಾಜಕೀಯ ಕಾಂಗ್ರೆಸ್ ​​​ಗೆ ಮುಸ್ಲಿಮರ ಮತ ಬೇಕು, ನಾಯಕತ್ವ ಬೇಡ: ಕಾಂಗ್ರೆಸ್​​ ನಾಯಕ ಮುಹಮ್ಮದ್ ಆರಿಫ್ ನಸೀಮ್...

ಕಾಂಗ್ರೆಸ್ ​​​ಗೆ ಮುಸ್ಲಿಮರ ಮತ ಬೇಕು, ನಾಯಕತ್ವ ಬೇಡ: ಕಾಂಗ್ರೆಸ್​​ ನಾಯಕ ಮುಹಮ್ಮದ್ ಆರಿಫ್ ನಸೀಮ್ ಖಾ

0

ಮಹಾರಾಷ್ಟ್ರ: ಕಾಂಗ್ರೆಸ್​​​ ಗೆ ನಮ್ಮ ಮತ ಬೇಕು ಆದರೆ ಮುಸ್ಲಿಂ ಸಮುದಾಯದ ನಾಯಕತ್ವ ಬೇಡ ಎಂದು ಕಾಂಗ್ರೆಸ್ ನಾಯಕ ಮುಹಮ್ಮದ್ ಆರಿಫ್ ನಸೀಮ್ ಖಾ ಬಹಿರಂಗವಾಗಿ ಆರೋಪಿಸಿದ್ದಾರೆ.

Join Our Whatsapp Group

ಮಹಾರಾಷ್ಟ್ರದ ಕಾಂಗ್ರೆಸ್​ ಪಕ್ಷದ ಪ್ರಚಾರ ಸಮಿತಿಯಿಂದ ಕೆಳಗಿದ ನಂತರ ಮುಹಮ್ಮದ್ ಆರಿಫ್ ನಸೀಮ್ ಖಾ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಯಾವುದೇ ಮುಸ್ಲಿಂ ನಾಯಕರನ್ನು ಕಾಂಗ್ರೆಸ್​​​​ ಪಕ್ಷವು ಲೋಕಸಭೆಗೆ ನಾಮನಿರ್ದೇಶನ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಹಮ್ಮದ್ ಆರಿಫ್ ನಸೀಮ್ ಖಾ ಅವರು, ಮಹಾ ವಿಕಾಸ್ ಅಘಾಡಿ (ಎಂವಿಎ) ಬಣವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಲೋಕಸಭೆ ಚುನಾವಣೆಗೆ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ ಎಂದು ಕಾಂಗ್ರೆಸ್​​ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಸ್ಥಾನಗಳಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಬಣವು ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರದಾದ್ಯಂತ ಅನೇಕ ಮುಸ್ಲಿಂ ಸಂಘಟನೆಗಳು, ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು, ಅಲ್ಪಸಂಖ್ಯಾತ ಸಮುದಾಯದಿಂದ ಒಬ್ಬ ಅಭ್ಯರ್ಥಿಯನ್ನು ಕಾಂಗ್ರೆಸ್ ನಾಮನಿರ್ದೇಶನ ಮಾಡುತ್ತದೆ ಎಂಬ ನಂಬಿಕೆ ಇತ್ತು. ಆದರೆ ದುರದೃಷ್ಟವಶಾತ್ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇವರಿಗೆ ನಮ್ಮ ಮತಬೇಕು, ಆದರೆ ನಮ್ಮ ನಾಯಕತ್ವಬೇಡ, ಈ ಎಲ್ಲಾ ಕಾರಣಗಳಿಂದಾಗಿ, ನಾನು ಕಾಂಗ್ರೆಸ್​​​ನಲ್ಲಿ ಮುಂದುವರಿಯುವುದಿಲ್ಲ, ನಮ್ಮ ಸಮುದಾಯಕ್ಕೆ ಕಾಂಗ್ರೆಸ್​​​ನಲ್ಲಿ ಯಾಕೆ ಅವಕಾಶವಿಲ್ಲ ಎಂಬ ಸಮುದಾಯದ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ ಎಂದು ಕಾಂಗ್ರೆಸ್​​ ವಿರುದ್ಧ ಮುಹಮ್ಮದ್ ಆರಿಫ್ ನಸೀಮ್ ಖಾ ಅವರು ಅಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಕಾಂಗ್ರೆಸ್ ಪ್ರಚಾರ ಸಮಿತಿಗೆ ರಾಜೀನಾಮೆ ನೀಡುವುದಾಗಿಯೂ ಅವರು ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಸಿದ್ಧಾಂತದಿಂದ ಹೊರಗೆ ಬರುತ್ತಿದೆ. ಮೊದಲಿನ ಪಕ್ಷದಂತಿಲ್ಲ, ಮಹಾರಾಷ್ಟ್ರದಲ್ಲಿ ಚುನಾವಣೆಗೆ ಟಿಕೆಟ್ ನೀಡುವಾಗ ಕಾಂಗ್ರೆಸ್ ಏಕೆ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸಿದೆ ಎಂದು ಗೊತ್ತಿಲ್ಲ. ಯಾವ ಕಾರಣಕ್ಕೆ ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.