ಮನೆ ರಾಜಕೀಯ ಜವಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ವರ್ತಿಸುತ್ತಿಲ್ಲ: ಮಂಗಳಾ ಸೋಮಶೇಖರ್‌

ಜವಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ವರ್ತಿಸುತ್ತಿಲ್ಲ: ಮಂಗಳಾ ಸೋಮಶೇಖರ್‌

0

ಮೈಸೂರು(Mysuru): ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಗಳು ಉತ್ತಮ ಆಡಳಿತವನ್ನು ನೀಡುತ್ತಿವೆ. ಆದರೆ, ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜವಾಬ್ದಾರಿಯುತ ಪ್ರತಿಪಕ್ಷವಾಗಿಯೂ ಕಾಂಗ್ರೆಸ್‌ ವರ್ತಿಸುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್‌ ಹೇಳಿದರು.

ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೂರಿದ್ದರು, ಖಾಲಿಯಿಲ್ಲದ ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್‌ ನಾಯಕರು ಕಾದಾಟ ನಡೆಸಿದ್ದಾರೆ. ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಪರ ನೀತಿಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.

2023ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿ, ಮುಂದಿನ ಯೋಜನೆಗಳೇನೆಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಉತ್ಸವಗಳನ್ನು ಆಚರಿಸಿಕೊಳ್ಳುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಜನರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ನಾಯಕರಿಗೆ ಅವರ ಅಸ್ತಿತ್ವ ಮುಖ್ಯವಷ್ಟೇ ಹೊರತು ಜನರ ಸಮಸ್ಯೆಗಳಲ್ಲ ಎಂದು ಕಿಡಿಕಾರಿದರು.

ಭ್ರಷ್ಟಾಚಾರದಿಂದಾಗಿಯೇ ಜಾರಿ ನಿರ್ದೇಶನಾಲಯದ ತನಿಖೆಯನ್ನು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಎದುರಿಸುತ್ತಿದ್ದಾರೆ. ಆದರೆ, ಅದನ್ನು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿರುವುದು ಅದರ ಭ್ರಷ್ಟಾಚಾರದ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ಶ್ರೀನಿವಾಸ್‌ ಗೌಡ, ಸಹ ವಕ್ತಾರ ಡಾ.ವಸಂತಕುಮಾರ್‌, ಮಾಧ್ಯಮ ಪ್ರಮುಖ್‌ ಎನ್‌.ರಾಜ್‌ಕುಮಾರ್‌, ಪಾಪಣ್ಣ ಇದ್ದರು.

ಹಿಂದಿನ ಲೇಖನಲಿಂಗಾಂಬುಧಿ ವೃಕ್ಷೋದ್ಯಾನದಲ್ಲಿ ನಾಗರಿಕರ ಪ್ರವೇಶಕ್ಕೆ ಶುಲ್ಕ: ಪ್ರತಿಭಟನೆ
ಮುಂದಿನ ಲೇಖನಅಕ್ಟೋಬರ್ ಮೊದಲ ವಾರದಲ್ಲಿ ಸುಪ್ರೀಂಕೋರ್ಟ್ ನಲ್ಲಿ ಜ್ಞಾನವಾಪಿ ಮಸೀದಿ ಅರ್ಜಿ ವಿಚಾರಣೆ