ಮನೆ ರಾಜಕೀಯ ಜನರನ್ನು ವಿಭಜಿಸುವುದಷ್ಟೇ ಕಾಂಗ್ರೆಸ್’ಗೆ ಗೊತ್ತು: ಜೆಪಿ ನಡ್ಡಾ

ಜನರನ್ನು ವಿಭಜಿಸುವುದಷ್ಟೇ ಕಾಂಗ್ರೆಸ್’ಗೆ ಗೊತ್ತು: ಜೆಪಿ ನಡ್ಡಾ

0

ಚಿತ್ರದುರ್ಗ: ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ಕ್ರಮಗಳು ಅತ್ಯಂತ ಖಂಡನೀಯ. ಜನರನ್ನು ವಿಭಜಿಸುವುದಷ್ಟೇ ಕಾಂಗ್ರೆಸ್’ಗೆ ಗೊತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಸ್ತುತ ದೇಶದಲ್ಲಿ ಅಪಾಯದಲ್ಲಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಪ್ರಜಾಪ್ರಭುತ್ವವಲ್ಲ ಎಂದು ತಿರುಗೇಟು ನೀಡಿದ್ದಾರೆ.

ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಿದ್ದಾರೆ ಎಂಬ ಕಾರಣಕ್ಕಾಗಿ ರಾಹುಲ್ ಗಾಂಧಿ ವಿದೇಶದ ನೆಲದಲ್ಲಿ ದೇಶದ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡುತ್ತಿರುವ ರಾಹುಲ್ ಗಾಂಧಿಯವರು, ತಮ್ಮ ಅಜ್ಜಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದನ್ನು ಸ್ಮರಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಡಿಜಿಟಲೀಕರಣ ಭಾರತದಲ್ಲಿ ಸಾಧ್ಯವಿಲ್ಲ ಎಂದು ಟೀಕಿಸಿತ್ತು. ಆದರೆ, ಇಂದು ವಿಶ್ವದ ಶೇಕಡಾ 40 ರಷ್ಟು ಡಿಜಿಟಲ್ ವಹಿವಾಟು ಭಾರತದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಭ್ರಷ್ಟಾಚಾರ, ಕಮಿಷನ್, ಅಪರಾಧೀಕರಣ ಮತ್ತು ವಂಶಾಡಳಿತದ ರಾಜಕೀಯವನ್ನು ಉತ್ತೇಜಿಸಿದೆ. ಆದರೆ, ಪ್ರಧಾನಿ ಮೋದಿಯವರು ‘ರಿಪೋರ್ಟ್ ಕಾರ್ಡ್’ ರಾಜಕಾರಣ ಆರಂಭಿಸಿದ್ದಾರೆ. ಹೇಳಿದನ್ನು ಮಾಡಿ ತೋರಿಸಿದ್ದಾರೆ. ಜವಾಬ್ದಾರಿಯುತ ಮತ್ತು ಬಲವಾದ ಸರ್ಕಾರವನ್ನು ರೂಪಿಸಿದ್ದಾರೆ. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದು ನಮ್ಮ ವಿಜಯ ಸಂಕಲ್ಪ ಯಾತ್ರೆಯಲ್ಲ, ಕರ್ನಾಟಕದ ವಿಜಯ (ವಿಜಯ್) ಯಾತ್ರೆ ಎಂದು ಹೇಳಿದರು.

ಇಡೀ ಜಗತ್ತೇ ಭಾರತವನ್ನು ಹೊಗಳಿ ಆರ್ಥಿಕವಾಗಿ ಬೆಳೆಯುತ್ತಿದೆ ಎಂದು ಹೇಳುತ್ತಿದೆ. ಆದರೆ, ರಾಹುಲ್ ಗಾಂಧಿ ಮಾತ್ರ ವಿದೇಶದಲ್ಲಿ ಭಾರತವನ್ನು ಅವಮಾನಿಸಿದ್ದಾರೆಂದು ಕಿಡಿಕಾರಿದರು.

ಹಿಂದಿನ ಲೇಖನಜಮಖಂಡಿ: ಇಂದು ಮಧ್ಯರಾತ್ರಿವರೆಗೆ ನಿಷೇದಾಜ್ಞೆ ಜಾರಿ
ಮುಂದಿನ ಲೇಖನಯಡಿಯೂರಪ್ಪ – ಸೋಮಣ್ಣಗೆ ಪಕ್ಷದಲ್ಲಿ ಸಮಾನ ಗೌರವ: ಮುರುಗೇಶ್ ನಿರಾಣಿ