ಮನೆ ರಾಜಕೀಯ ಒಬ್ಬರ ಅನಾರೋಗ್ಯ ಹಿಯಾಳಿಸುವ ವಿಕೃತಿ ಇರುವುದು ಬಿಜೆಪಿಗೆ ಮಾತ್ರ: ಕಾಂಗ್ರೆಸ್

ಒಬ್ಬರ ಅನಾರೋಗ್ಯ ಹಿಯಾಳಿಸುವ ವಿಕೃತಿ ಇರುವುದು ಬಿಜೆಪಿಗೆ ಮಾತ್ರ: ಕಾಂಗ್ರೆಸ್

0

ಬೆಂಗಳೂರು(Bengaluru): ಒಬ್ಬರ ಅನಾರೋಗ್ಯವನ್ನು ಹಿಯಾಳಿಸುವ ವಿಕೃತಿ ಇರುವುದು ಬಿಜೆಪಿಯವರಿಗೆ ಮಾತ್ರ ಎಂದು ಕಾಂಗ್ರೆಸ್ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದೆ.

ಇಂದು ಟ್ವೀಟ್ ಮಾಡಿರುವ ಕಾಂಗ್ರೆಸ್ , ಸಿಡಿ’ ಪಕ್ಷವು ‘ಇಡಿ’ಯನ್ನು ಚೂ ಬಿಟ್ಟರೆ ಹೆದರುವವರು ಯಾರೂ ಇಲ್ಲ. ಹಾಗೆಯೇ ಕೋವಿಡ್ ವರದಿ ನೀಡುವುದು ನಿಮ್ಮದೇ ಸರ್ಕಾರದ ವ್ಯವಸ್ಥೆ ಎಂಬುದು ನೆನಪಿರಲಿ. ಎಸ್‌ಐಟಿ ತನಿಖೆ ತಪ್ಪಿಸಲು ರಮೇಶ್ ಜಾರಕಿಹೊಳಿಯ ಕೋವಿಡ್ ಸೋಂಕಿನ ನಾಟಕವನ್ನು ರಾಜ್ಯ ಕಂಡಿದೆ’ ಎಂದು ಕಿಡಿಕಾರಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೋವಿಡ್ ದೃಢಪಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಗುರುವಾರ ತಿಳಿಸಿದ್ದರು.

ಸೋನಿಯಾ ಗಾಂಧಿ ಅವರು ಇ.ಡಿ ವಿಚಾರಣೆಗೆ ಹಿಂದಿಟ್ಟು ಹಾಕುವ ಉದ್ದೇಶದಿಂದ ಕೋವಿಡ್‌ ನೆಪ ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಟ್ವಿಟರ್‌ನಲ್ಲಿ ಆರೋಪಿಸಿತ್ತು.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ್‌ ಗಾಂಧಿ ಅವರಿಗೆ ಇ.ಡಿಬುಧವಾರ ಸಮನ್ಸ್‌ ಜಾರಿ ಮಾಡಿ, ಸೋನಿಯಾ ಗಾಂಧಿಗೆ ಜೂನ್ 8ರಂದು ಹಾಗೂ ರಾಹುಲ್ ಗಾಂಧಿಗೆ ಜೂನ್ 2ರಂದು ಹಾಜರಾಗುವಂತೆ ಇ.ಡಿ. ಸೂಚಿಸಿತ್ತು.