ಮನೆ ರಾಜಕೀಯ ಮಾರ್ಚ್ ವೇಳೆಗೆ ಕೆಪಿಸಿಸಿ ಪುನಾರಚನೆ , ಶೀಘ್ರದಲ್ಲೇ ಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮಾರ್ಚ್ ವೇಳೆಗೆ ಕೆಪಿಸಿಸಿ ಪುನಾರಚನೆ , ಶೀಘ್ರದಲ್ಲೇ ಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

0

ಬೆಂಗಳೂರು: ಕಾಂಗ್ರೆಸ್‌ನ ಬಹು ನಿರೀಕ್ಷಿತ ಕೆಪಿಸಿಸಿ ಪುನಾರಚನೆ ಮಾರ್ಚ್ ವೇಳೆಗೆ ನಡೆಯಲಿದ್ದು, ಶೀಘ್ರದಲ್ಲೇ ಚುನಾವಣೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. 
ಸುಮಾರು ಒಂದು ದಶಕ ಅವಧಿಗೂ ಮೀರಿ ರಾಜ್ಯ ಕಾಂಗ್ರೆಸ್ ನಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಕಳೆದ ವರ್ಷ ಆಯುಧ ಪೂಜೆ ವೇಳೆಗೆ ಕೆಪಿಸಿಸಿ ಪುನಾರಚನೆ ನಡೆಯಲಿದೆ ಎಂದು ಡಿಕೆ. ಶಿವಕುಮಾರ್ ಅವರು ಹೇಳಿದ್ದರು. ಆದರೆ, ಆಯುಧ ಪೂಜೆ ಮುಗಿದು ಸಂಕ್ರಾಂತಿ ಮುಗಿದರೂ ಅದು ಸಾಧ್ಯವಾಗಿಲ್ಲ. 

ಇದೀಗ ಮತ್ತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಕುಮಾರ್ ಅವರು, ಪಕ್ಷವು ಸದಸ್ಯತ್ವ ಅಭಿಯಾನವನ್ನು ಆರಂಭಿಸಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳುವವರಿಗೆ ಸ್ಥಾನಗಳನ್ನು ನೀಡಲು ಚಿಂತನೆ ನಡೆಸಿದೆ. ಮಾರ್ಚ್ ಅಂತ್ಯದವರೆಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಆ ವೇಳೆಗೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ಇದೆ ಎಂದು ಹೇಳಿದ್ದಾರೆ. 

ಚುನಾವಣೆಗೆ ಕೇವಲ 14 ತಿಂಗಳುಗಳಿದ್ದು, ಪಕ್ಷದ ಸ್ಥಾನಗಳ ಬಗ್ಗೆ ಆಸಕ್ತಿ ಹೊಂದಿರುವ ಹಾಲಿ ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಿ ಕೆಲಸ ಮಾಡಿ, ಕ್ಷೇತ್ರಗಳ ನೋಡಿಕೊಳ್ಳುವಂತೆ ಸೂಚಿಸಿದ್ದೇನೆಂದು ತಿಳಿಸಿದರು. 

ಕೆಪಿಸಿಸಿ ಕಾರ್ಯಾಧ್ಯಕ್ಷ ಎಂಎಲ್ ಸಿ ಸಲೀಂ ಅಹಮದ್ ಮಾತನಾಡಿ, ಯುವ ಕಾಂಗ್ರೆಸ್ ಮತ್ತು ಎನ್ ಎಸ್ ಯುಐ ಚುನಾವಣೆ ಮುಗಿದಿದ್ದು, ಇದೀಗ ಪಕ್ಷದ ಚುನಾವಣೆಯತ್ತ ಗಮನಹರಿಸುತ್ತಿದ್ದೇವೆ. ಬ್ಲಾಕ್, ಡಿಸಿಸಿ ಮತ್ತು ಕೆಪಿಸಿಸಿ ಮಟ್ಟದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಹೇಳಿದ್ದಾರೆ.