ಮನೆ ಅಪರಾಧ ಚಾಮರಾಜನಗರದಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್​ ಹೃದಯಾಘಾತದಿಂದ ಸಾವು

ಚಾಮರಾಜನಗರದಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್​ ಹೃದಯಾಘಾತದಿಂದ ಸಾವು

0

ಚಾಮರಾಜನಗರ : ಈ ಸರಿಯಾದ ಹತ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದ ಕಾಯಿಲೆ ಆಗಿಬಿಟ್ಟಿದೆ. ವಯಸ್ಸಿನ ಮಿತಿಯಿಲ್ಲದೆ ಎಲ್ಲರಲ್ಲೂ ಹೃದಯಘಾತ ಕಾಣಿಸಿಕೊಳ್ಳುತ್ತಿದೆ. ಇದೀಗ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್​​ವೊಬ್ಬರು ಹೃದಯಘಾತದಿಂದ ಕೊನೆಯುಸಿರೆಳೆದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ಜರುಗಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಆಲಬಾವಿ ಗ್ರಾಮದ ಪರಶುರಾಮ್ (31) ಮೃತಪಟ್ಟ ಕಾನ್ಸ್‌ಟೇಬಲ್. ಹನೂರು ತಾಲೂಕಿನ ರಾಮಪುರ ಪೊಲೀಸ್ ಠಾಣೆಯಲ್ಲಿ ಪರಶುರಾಮ್ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಎಸ್.ಬಿ ಕರ್ತವ್ಯ ಮಾಡುತ್ತಿದ್ದರು.

ಇಂದು ಬೆಳಗ್ಗೆ ಕರ್ತವ್ಯದಲ್ಲಿದ್ದಾಗಲೇ ಹೃದಯಘಾತ ಸಂಭವಿಸಿದೆ. ತಕ್ಷಣ ಸಹೋದ್ಯೋಗಿಗಳು ರಾಮಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದ್ಯೂಯುವಂತೆ ಸಲಹೆ ನೀಡಿದ್ದಾರೆ. ಕಾರಿನಲ್ಲಿ ಚಿಕಿತ್ಸೆಗೆ ಕರೆ ತರುತ್ತಿದ್ದಾಗಲೇ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.