ಮನೆ ಮನೆ ಮದ್ದು ಮಲಬದ್ಧತೆ

ಮಲಬದ್ಧತೆ

0

1. ಒಂದು ಟೀ ಚಮಚದಷ್ಟು ಹಸಿ ಶುಂಠಿಯ ರಸ, ಎರಡು ಟೀ ಚಮಚದಷ್ಟು ನಿಂಬೆಹಣ್ಣಿನ ರಸ, ಇನ್ನೆರಡು ಟೀ ಚಮದಷ್ಟು ಪುದೀನಾ ಸೊಪ್ಪಿನ ರಸ, 8 ಸ್ಪೂನಿನಷ್ಟು ಜೇನುತುಪ್ಪ ಬೆರೆಸಿ, 4 5 ದಿನವೂ ಎರಡೆರಡು ಬಾರಿ ಸೇವಿಸುತ್ತಿದರೆ ಮಲಬದ್ಧತೆಯ ನಿವಾರಣೆ ಆಗುವುದು.

Join Our Whatsapp Group

2. ಜೇನುತುಪ್ಪವನ್ನು ಕನಿಷ್ಠ ಪ್ರಮಾಣದಲ್ಲಿ ದಿನವೂ ಸೇವಿಸುತ್ತಿರುವುದರಿಂದಲೂ ಮಲಬದ್ಧತೆಯ ತೊಂದರೆ ಕಡಿಮೆ ಆಗುವದು.

3.ಸೇಬನ್ನು ಸಿಪ್ಪೆ ಸಹಿತ ತಿನ್ನುವುದರಿಂದ ಮಲಬದ್ಧತೆಯ ರೋಗ ನಿವಾರಣೆ ಆಗುವುದು.

4. ಉಪ್ಪು ಮತ್ತು ಜೇನುತುಪ್ಪವನ್ನು ನೆಂಜಿಕೊಂಡು,ಹೀಚ್ಚು ಮಾವಿನ ಕಾಯಿ ತಿಂದರೆ ಮಲಬದ್ಧತೆಯ ರೋಗ ನಿಲ್ಲುತ್ತದೆ.

5. ಮಾವಿನ ಹಣ್ಣನ್ನು ಊಟವಾದ ನಂತರ ಉಪಯೋಗಿಸುವುದರಿಂದ ಮಲಬದ್ಧತೆಯ ರೋಗ ದೂರ ಆಗುವುದು.

6. ಬಾಳೆಯ ಹಣ್ಣನ್ನು ಮೊಸರನ್ನದಲ್ಲಿ ಕಿವುಚಿ ತಿನ್ನುವುದರ ಮೂಲಕವೂ ಮಲಬದ್ಧತೆ ಬಾಧಿಸುವುದು.

7. ಊಟ ಆದನಂತರ ದಿನವೂ ಬಾಳೆಯ ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆಯ ನಿವಾರಣೆ ಆಗುವುದು.

8. ಸಿಪ್ಪೆ ತೆಗೆದ ಪಾರಂಗಿ ಕಾಯಿಯನ್ನು ಸಣ್ಣ ಹೋಳುಗಳಾಗಿ ಮಾಡಿ, ಕಾಳು ಮೆಣಸುಪುಡಿ, ನಿಂಬೆರಸ, ಉಪ್ಪು ಬೆರೆಸಿ, ತಿನ್ನುವುದರಿಂದಲೂ ಮಲಬದ್ಧತೆಯಿಂದ ಪಾರಾಗುಬಹುದು.

9. ಕರುಳಿನಲ್ಲಿರುವ ದುಂಡು ಹುಳು ನಾಶವಾಗಿ ಮಲಬದ್ಧತೆಯ ನಿವಾರಣೆ ಆಗುವುದು.

10. ಬಿಳಿದ್ರಾಕ್ಷಿ ಹಣ್ಣನ್ನು ದಿನವೂ ಬಿಡದೆ ಎರಡು ಮೂರು ದಿನ ತಿನ್ನುತ್ತಿದ್ದರೆ ಮಲಬದ್ಧತೆಯ ಭಯ ಇರದು.

11. ಆಲೂಗೆಡ್ಡೆಯನ್ನು ಕೆಂಡದ ಮೇಲಿಟ್ಟು ಸುಟ್ಟು ತಿನ್ನುತ್ತಿದ್ದರೆ ಮಲಬದ್ಧತೆಯ ರೋಗದಿಂದ ದೂರ ಆಗಬಹುದು.

12. ಪ್ರತಿದಿನವೂ ಬಾಳೆಹಣ್ಣಿನೊಂದಿಗೆ ಯಾಲಕ್ಕಿ ಸೇವಿಸುತ್ತಿದ್ದರೆ ಮಲಬದ್ಧತೆಯಿಂದ ಸಂಪೂರ್ಣ ಪಾರಾಗಬಹುದು.

13. ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಮಲಬದ್ಧತೆ ಇರದು.

14. 14. ಬಿಳಿ ಜೋಳದ ರೊಟ್ಟಿ ಮಾಡಿ, ಚೆನ್ನಾಗಿ ಆಗಿದು ತಿಂದರೆ ಮಲಬದ್ಧತೆಯ ದೂರ ಆಗುವುದು.

15. ಬೀಟ್ರೂಟ್ ಸೇವನೆಯಿಂದ ಮಲಬದ್ಧತೆಯ ರೋಗ ದೂರ ಆಗುವುದು..

16. ಸಬ್ಬಕ್ಕಿ ಸೊಪ್ಪಿನ ಪಲ್ಯ ಈ ವ್ಯಾದಿಯನ್ನು ಗುಣಪಡಿಸುವುದರಲ್ಲಿ ತುಂಬಾ ಪರಿಣಾಮಕಾರಿ.

17. ಹಸಿಮೂಲಂಗಿಯ ಹೋಳುಗಳಿಗೆ ಕಾಡು ಮೆಣಸುಪುಡಿ,ಉಪ್ಪು ಬೆರೆಸಿ ತಿಂದರೆ ಮಲವಿಸರ್ಜನೆಯಲ್ಲಿ ಸಲೀಸಾಲಾಗುವುದು.

18. ಮಗುವಿಗೆ ಮಲ್ಲ ಕಟ್ಟಿದರೆ ಒಂದು ಟೀ ಸ್ಪೂನಿನಷ್ಟು ಸೋಂಪುಕಾಳಿನ ಕಷಾಯವನ್ನು ಹಾಲಿನೊಂದಿಗೆ ಕುಡಿಸಿದರೆ ಸುಲಭವಾಗಿ ಮಲವಿಸರ್ಜನೆ ಆಗುವುದು.

19. ಈ ಕಷಾಯನು ಸ್ವಲ್ಪ ಸ್ವಲ್ಪವಾಗಿ ತಪ್ಪದೆ ಕುಡಿಯುವುದರಿಂದ ಮಗುವಿಗೆ ಜೀರ್ಣ ಶಕ್ತಿಯು ಹೆಚ್ಚುವುದು.

20. ನಿಂಬೆ ಹಣ್ಣಿನ ರಸದಲ್ಲಿ ಹರಳೆಣ್ಣೆಯನ್ನು ಸ್ವಲ್ಪ ಸೇರಿಸಿ ಕುಡಿಸಿದರೆ ಚೆನ್ನಾಗಿ ಭೇಧಿ ಆಗುವುದು.

21. ಹುರುಳಿ ಕಾಳನ್ನು ನೀರಿನಲ್ಲಿ ಬೇಯಿಸಿ, ಬಸಿದು ಅದಕ್ಕೆ ನಿಂಬೆರಸ, ಉಪ್ಪು ಸೇರಿಸಿ, ಒಂದು ಬಟ್ಟಳಲಿನಷ್ಟು ಕುಡಿದರೆ ಮಲಬದ್ಧತೆ ದೂರ ಆಗುವುದು.

22. ನವಿಲುಕೋಸನ್ನು ಬೇಯಿಸಿ,

ಪಲ್ಯ ಮಾಡಿ ತಿನ್ನುವುದರಿಂದ ಮಲಬದ್ಧತೆ ಬಾಧಿಸದು.

23. ಗೋಣಿ ಸೊಪ್ಪನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗದು..

24. ಚಕ್ರಮುನಿ ಸೊಪ್ಪನ್ನು ಬೇಯಿಸಿ,ಬಸಿದ ಸಾರು ಮಾಡಿ,ಅನ್ನಕ್ಕೆ ಹಾಕಿಕೊಂಡು ಒಂದೆರಡು ಬಾರಿ ಊಟ ಮಾಡುವುದರಿಂದಲೂ ಮಲವಿಸರ್ಜನೆ ಸಲೀಸಾಗಿ ಆಗುವುದು.

25. ಹಸಿರು ಮೆಣಸಿನಕಾಯಿಯನ್ನು ಹಿತಮಿತವಾಗಿ ಬಳಸುವುದರಿಂದ ಮಲಬದ್ಧತೆ ಸಂಭವಿಸದು. 26.  ಹಕ್ಕರಿಕೆ ಸೊಪ್ಪನ್ನು ಬಳಸುತ್ತಿದ್ದರೆ ಮಲಬದ್ಧತೆ ಉಂಟಾಗದು.