ಮನೆ ರಾಜ್ಯ ಸಮಾನತೆಯ ಜೀವನಕ್ಕೆ ಸಂವಿಧಾನ ಅಡಿಪಾಯ-ಕೆ.ಹರೀಶ್ ಗೌಡ

ಸಮಾನತೆಯ ಜೀವನಕ್ಕೆ ಸಂವಿಧಾನ ಅಡಿಪಾಯ-ಕೆ.ಹರೀಶ್ ಗೌಡ

ಓವೆಲ್ ಮೈದಾನದಲ್ಲಿ ಅಂತಾರಾಷ್ಟ್ರೀಯ ಪ್ರಜಾ ಪಭುತ್ವ ದಿನಾಚರಣೆ

0

ಮೈಸೂರು: ಸಮಾನತೆಯ ಜೀವನಕ್ಕೆ ಸಂವಿಧಾನ ಅಡಿಪಾಯ. ಸಂವಿಧಾನವನ್ನು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮ ಸಮಾಜದ ನಿರ್ಮಾಣ ಮಾಡುವುದರ ಜೊತೆಗೆ ಸಮಾನತೆಯಿಂದ ಜೀವನ ನಡೆಸಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ನಗರ ಓವಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರವು ಈ ದಿನ ಸಂವಿಧಾನ ಓದು ಕಾರ್ಯಕ್ರಮವನ್ನು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರಿಗೂ ಕೂಡ ಸಂವಿಧಾನದ ಅರಿವು ಮೂಡಿಸಲು ಮುಂದಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರು 3 ವರ್ಷಗಳ ಕಾಲ ತಮ್ಮ ಜ್ಞಾನದ ಜೊತೆಗೆ ವಿವಿಧ ದೇಶಗಳ ಸಂವಿಧಾನದ ಎರವಲು ಪಡೆದು ರಚಿಸಿದ ಸರ್ವರು ಸಮಾನರು ಎಂಬ ಸಂವಿಧಾನದಿoದ ಪ್ರತಿಯೊಬ್ಬರೂ ಕೂಡ ಇಂದು ಸಮಾನತೆಯಿಂದ ಬದುಕುತ್ತಿದ್ದೇವೆ. ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ಜಗತ್ತಿನಲ್ಲೇ ಸರ್ವ ಶ್ರೇಷ್ಠ ಪ್ರಜಾಪ್ರಭುತ್ವದ ಸಂವಿಧಾನವಾಗಿದೆ ಎಂದರು.

ಸoವಿಧಾನ ಉಳಿದರೆ ಮಾತ್ರ ಪ್ರತಿಯೊಬ್ಬರೂ ಕೂಡ ಸಮಾನತೆಯಿಂದ ಬದುಕಲು ಸಾಧ್ಯ. ಸಂವಿಧಾನವಿಲ್ಲದಿದ್ದರೆ ಪ್ರತಿಯೊಬ್ಬರೂ ಕೂಡ ಅನಾಗರಿಕರಾಗಬಹುದಾದ ಸಂಭವವಿದೆ. ಸಂವಿಧಾನದಿoದ ಬಡವ ಶ್ರೀಮಂತ ಎಂಬ ಭೇದ-ಭಾವವಿಲ್ಲದೆ ನಾವೆಲ್ಲರೂ ಬದುಕುತ್ತಿದ್ದೇವೆ. ಶಾಲಾ, ಕಾಲೇಜುಗಳಲ್ಲಿ ಕರ್ನಾಟಕ ರಾಜ್ಯಸರ್ಕಾರದ ಆದೇಶದಂತೆ ಸಂವಿಧಾನವನ್ನು ಭೋಧಿಸಿ, ಉತ್ತಮ ನಾಗರಿಕರು ಮತ್ತು ಸಮಾನತೆಯನ್ನು ಬೆಳಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.

ಸಂವಿಧಾನವನ್ನು ಉಳಿಸಲು ಪ್ರತಿಯೊಬ್ಬರೂ ಶ್ರಮ ವಹಿಸಬೇಕು. ಸಂವಿಧಾನ ಬದಲಾಯಿಸುವ ಬಗೆಗೆ ಎಚ್ಚರದಿಂದಿರಿ. ಮೈಸೂರು ವಿಭಾಗದಲ್ಲಿ ಸಂವಿಧಾನ ಕುರಿತು ಹೆಚ್ಚಿನ ವಿಚಾರವನ್ನು ತಿಳಿದುಕೊಳ್ಳಲು ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ವಿಭಾಗಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂವಿಧಾನವನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಿ ಎಂದು ಸಲಹೆ ನೀಡಿದರು.

ಶಾಸರಕಾರದ ತನ್ವೀರ್ ಸೇಠ್ ಅವರು ಮಾತನಾಡಿ ಸಂವಿಧಾನದ ಪೀಠಿಕೆಯಯನ್ನು ನಾವೆಲ್ಲರೂ ಕೂಡ ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಭವ್ಯ ಭಾರತವನ್ನು ಕಟ್ಟುವ ಪರಿಕಲ್ಪನೆಯು ನಮ್ಮ ಮುಂದೆ ಬಂದಾಗ 12 ನೇ ಶತಮಾನದ ಬಸವಣ್ಣ ನವರ ಅನುಭವ ಮಂಟಪವು ಕೂಡ ಒಂದು ಉದಾಹರಣೆಯಾಗಿದೆ. ಸಂವಿಧಾನದ ವಿಚಾರವನ್ನು ತಿಳಿಯಲು ವಿದ್ಯಾರ್ಥಿಗಳು ಶಾಲಾ ಕಾಲೇಜಿನಲ್ಲಿನ ಗ್ರಂಥಾಲಯದ ಉಪಯೋಗವನ್ನು ಪಡೆದುಕೊಳ್ಳಿ ಎಂದರು.

ಪ್ರತಿಯೊಬ್ಬರು ಸಂವಿಧಾನವನ್ನು ಅರಿತು ಹೊಸ ದೇಶವನ್ನು ಕಟ್ಟುವ ಕೆಲಸ ಪ್ರತಿಯೊಬ್ಬರ ಮನೆಯಿಂದ ಆರಂಭವಾಗಬೇಕು. ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸೂಕ್ಷ್ಮವಾದ ವಿಚಾರಗಳನ್ನು ಅರ್ಥಮಾಡಿಕೊಂಡು ಅದರಂತೆ ನಡೆಯಬೇಕು ಎಂದು ತಿಳಿಸಿದರು.

ಮಾನವ ಜನ್ಮ ಪಡೆಯುವ ಸಂಧರ್ಭದಲ್ಲಿ ಯಾರು ಕೂಡ ಯಾವುದೇ ಜಾತಿ ಧರ್ಮಕ್ಕೆ ಅರ್ಜಿ ಹಾಕಿ ಜನ್ಮ ಪಡೆಯಲಿಲ್ಲ. ಹುಟ್ಟು ಆಕಸ್ಮಿಕ ಸಾವು ಖಚಿತ ಎಂಬುದನ್ನು ಅರ್ಥಮಾಡಿಕೊಂಡು ಸಮಾನತೆಯಿಂದ ಜೀವನವನ್ನು ನಡೆಸಬೇಕು. ಜಾತಿ. ಧರ್ಮ, ಭಾಷೆ ಎಂಬುದನ್ನು ತೊರೆದು ಸಮಾನತೆಯಿಂದ ಬದುಕಿ ಉತ್ತಮ ಪ್ರಜಾಪ್ರಭುತ್ವ ದೇಶ ನಿರ್ಮಾಣ ಮಾಡಲು ಮುನ್ನಡೆಯೋಣ ಎಂದು ಕರೆ ನೀಡಿದರು.

ಮುಖ್ಯಭಾಷಣಕಾರರಾಗಿ ಮಾತನಾಡಿದ ಡಾ. ಬಿ.ಆರ್ ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಜೆ. ಸೋಮಶೇಖರ್ ಅವರು ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರವು ಇಂದು ಹೊಸ ಚರಿತ್ರೆಗೆ ನಾಂದಿ ಹಾಡಿದೆ. ಕನ್ನಡ ನೆಲವು ಅಂದಿನಿoದಲೂ ಕೂಡ ಪ್ರಜಾಸತ್ತಾತ್ಮಕ ನೆಲ ಎಂಬುದನ್ನು ನಿರೂಪಿಸುತ್ತಾ ಬಂದಿದೆ. ದೇಶದ ಇತಿಹಾಸದಲ್ಲಿ ಮೈಸೂರಿನ ಮಹಾರಾಜರು ಪ್ರಜಾಪ್ರಭುತ್ವವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯನ್ನು ಕಂಡು, ಭಾರತದಲ್ಲಿ ಪ್ರಥಮ ಬಾರಿಗೆ ಪ್ರಜಾಪ್ರಭುತ್ವ ಸಂಸ್ಥೆಯನ್ನು ಕಟ್ಟಿದರು. ಈ ನೆಲದಲ್ಲಿ ನಾವು 73 ವರ್ಷಗಳ ನಂತರ ಸಂವಿಧಾನದ ಪ್ರಸ್ತಾವನೆಯನ್ನು ಸಾರ್ವಜನಿಕವಾಗಿ ಯಾವುದೇ ಭೇದ ಭಾವ, ಲಿಂಗ, ಜಾತಿ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಈ ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು.

ಸಂವಿಧಾನದ ಪ್ರಸ್ತಾವನೆಯನ್ನು ನಾವು ಮೊದಲು ಅರ್ಥೈಸಿಕೊಳ್ಳಬೇಕು. ಪ್ರತಿಯೊಬ್ಬರ ಜೀವನವನ್ನು ಅರ್ಥಪೂರ್ಣವಾಗಿ ನಿರ್ಮಿಸಿಕೊಳ್ಳುವ ಶಕ್ತಿಯನ್ನು ಸಂವಿಧಾನದ ಪ್ರಸ್ತಾವನೆ ನೀಡಿದೆ. ಪ್ರಸ್ತಾವನೆಯ ಬಗ್ಗೆ ತಿಳಿಯಬೇಕೆಂದರೆ ಪ್ರಮುಖವಾಗಿ ಹೋರಾಟದ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಸರ್ವಾಧಿಕಾರಿ ಧೋರಣೆಯನ್ನು ತೆಗೆದು ಹಾಕುವ ಸಲುವಾಗಿ ಫಿಲಿಫೈನ್ ದೇಶದಲ್ಲಿ ನಡೆದಂತಹ ಹೋರಾಟದ ಫಲವಾಗಿ ಅಲ್ಲಿನ ನಾಯಕರುಗಳು ಒಟ್ಟಾಗಿ ಸೇರಿ ಜಾಗತಿಕ ಮಟ್ಟದಲ್ಲಿ ಸರ್ವಾಧಿಕಾರವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಂಕಲ್ಪ ತೊಟ್ಟಿದ್ದರು. ಆ ಸಂಕಲ್ಪದ ಫಲವಾಗಿ ನಾವು ವಿಶ್ವಸಂಸ್ಥೆಯ ಮೂಲಕ ಇಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಿದ್ದೇವೆ ಎಂದರು.

ಜಿಲ್ಲಾಧಿಕಾರಿಗಳಾದ ಡಾ .ಕೆ ವಿ ರಾಜೇಂದ್ರ ಅವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಡಾ.ಜಿ ರೂಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ಎಂ ಗಾಯಿತ್ರಿ, ಮಹಾನಗರ ಪಾಲಿಕೆ ಆಯುಕ್ತರಾದ ಅಶಾದ್ ಉರ್ ರೆಹಮಾನ್ ಶರೀಫ್, ನಾಗರಿಕ ಮತ್ತು ಜಾರಿ ನಿರ್ದೇಶನಾಲಯದ ಪೊಲೀಸ್ ಅಧಿಕ್ಷಕರಾದ ಕವಿತಾ, ಅಪರ ಜಿಲ್ಲಾಧಿಕಾರಿಗಳಾದ ಪಿ ಶಿವರಾಜ್, ಮಾಜಿ ಮೇಯರ್ ಪುರಷೋತ್ತಮ್, ಪ್ರವಾಸೋಸ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಸವಿತಾ, ಉಪ ವಿಭಾಗಧಿಕಾರಿಗಳಾದ ರಕ್ಷಿತ್. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಕುಮಾರಸ್ವಾಮಿ ಮತ್ತು ವಿವಿಧ ಕಾಲೇಜಿ ವಿದ್ಯಾರ್ಥಿಗಳು, ದಲಿತ ಓಕ್ಕೂಟಗಳ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಹಿಂದಿನ ಲೇಖನಡಿಎಂಕೆ ಪಕ್ಷವನ್ನು ತೃಪ್ತಿ ಪಡಿಸಲು ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ: ಮಾಜಿ ಸಿಎಂ ಬಿಎಸ್ ವೈ
ಮುಂದಿನ ಲೇಖನಡಿಸಿಪಿ-ಎಸ್ ಪಿ ಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಎಚ್ಚರಿಕೆ