ಮನೆ ಸುದ್ದಿ ಜಾಲ ಹೊನ್ನೂರು ಗ್ರಾಪಂನಿಂದ ಶಾಲೆಗೆ ಶೌಚಗೃಹ ನಿರ್ಮಾಣ

ಹೊನ್ನೂರು ಗ್ರಾಪಂನಿಂದ ಶಾಲೆಗೆ ಶೌಚಗೃಹ ನಿರ್ಮಾಣ

0
Oplus_0

ಯಳಂದೂರು: ಹೊನ್ನೂರು ಗ್ರಾಮ ಪಂಚಾಯಿತಿಯ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-೦೧ ಗೆ ಶೌಚಗೃಹವನ್ನು ನಿರ್ಮಾಣ ಮಾಡಿದ್ದು ಶುಕ್ರವಾರ ಇದನ್ನು ಗ್ರಾಪಂ ಅಧ್ಯಕ್ಷ ಎಂ. ಗುರುಪ್ರಸಾದ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ೨೦೨೨-೨೩ ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ೪.೩೦ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶೌಚಗೃಹವನ್ನು ನಿರ್ಮಾಣ ಮಾಡಲಾಗಿದೆ. ಈ ಶಾಲೆಯಲ್ಲಿ ಶೌಚಗೃಹ ಬೇಕೆಂದು ಇಲ್ಲಿನ ಶಿಕ್ಷಕರು ಮನವಿ ಸಲ್ಲಿಸಿದ್ದರು. ಹಾಗಾಗಿ ಇದು ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇದರ ನಿರ್ಮಾಣ ಮಾಡಲಾಗಿದೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ನರೇಗಾ ಯೋಜನೆಯಿಂದ ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳು ನಡೆದಿವೆ. ಈ ಸಾಲಿನಲ್ಲಿ ೨.೮೯ ಕೋಟಿ ರೂ. ಕಾಮಗಾರಿಯನ್ನು ಮಾಡಲಾಗಿದೆ. ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಇಂತಹ ಕಾಮಗಾರಿಗಳಿಗೆ ಹೆಚ್ಚಿನ ಅದ್ಯತೆಯನ್ನು ನೀಡಲಾಗುವುದು. ಪಂಚಾಯಿತಿಯ ಮೂಲಭೂತ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಲಾಗುವುದು. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪಾಧ್ಯಕ್ಷೆ ನೇತ್ರಾವತಿ ಸದಸ್ಯರಾದ ಆರ್. ಪುಟ್ಟಬಸವಯ್ಯ, ಇಂದಿರಾ, ಎಚ್.ಕೆ. ಶಿವಪ್ರಕಾಶ್, ಎ. ನಾಗರತ್ನಮ್ಮ, ಜಿ. ಅನಿತನಿರಂಜನ್, ಜಯಮ್ಮ, ಭಾಗ್ಯಮ್ಮ, ಟಿ.ಎನ್. ರಾಧಾ, ರಾಧ, ಎಚ್.ಆರ್. ಕುಮಾರ್, ಪಿಡಿಒ ನಿರಂಜನ್‌ಕುಮಾರ್ ಮುಖ್ಯ ಶಿಕ್ಷಕ ಶಿವಮಾದಯ್ಯ ಸೇರಿದಂತೆ ಅನೇಕರು ಇದ್ದರು.