ಮನೆ ಸ್ಥಳೀಯ ಸುರಕ್ಷಿತ ಆಹಾರ ಗ್ರಾಹಕನ ಹಕ್ಕು: ಕಲಬೆರಕೆ ಆಹಾರ ನಿಷೇಧಕ್ಕೆ ಮುಂದಾಗಲು ವಿದ್ಯಾರ್ಥಿಗಳಿಗೆ ಕರೆ- ಹಿರಿಯ ವಿಜ್ಞಾನಿ...

ಸುರಕ್ಷಿತ ಆಹಾರ ಗ್ರಾಹಕನ ಹಕ್ಕು: ಕಲಬೆರಕೆ ಆಹಾರ ನಿಷೇಧಕ್ಕೆ ಮುಂದಾಗಲು ವಿದ್ಯಾರ್ಥಿಗಳಿಗೆ ಕರೆ- ಹಿರಿಯ ವಿಜ್ಞಾನಿ ಡಾ. ಜಿ. ಪಾಂಡುರಂಗ ಮೂರ್ತಿ

0

ಮೈಸೂರು: ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆಯ ಅಂಗವಾಗಿ  ಮೈಸೂರು ಗ್ರಾಹಕರ ಪರಿಷತ್ತು ವತಿಯಿಂದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಶ್ರೀ ಕೆ. ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ  ವಿಶ್ವ ಗ್ರಾಹಕ ಹಕ್ಕುಗಳ ರಕ್ಷಣೆ ದಿನಾಚರಣೆಯ ಸರಣಿ ಉಪನ್ಯಾಸ ವಿಚಾರ ಗೋಷ್ಠಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವಿಜ್ಞಾನಿ ಮತ್ತು ಸಂಶೋಧನಾ ಪ್ರಾಧ್ಯಾಪಕ ಹಾಗು MGP ಸಂಚಾಲಕರೂ ಅದ ಡಾ. ಜಿ. ಪಾಂಡುರಂಗ ಮೂರ್ತಿ ತಮ್ಮ ವಿಶಿಷ್ಟವಾದ ದೃಶ್ಯ- ಮಾಧ್ಯಮ ಪ್ರಾತ್ಯಕ್ಷಿಕೆ ಆಧಾರಿತ ಪ್ರವಚನದಲ್ಲಿ ಪದವಿ ವಿದ್ಯಾರ್ಥಿಗಳನ್ನು ಕುರಿತು, ಗ್ರಾಹಕರ ಹಕ್ಕುಗಳು, ಸರಕು-ಉತ್ಪನ್ನಗಳ ಕೊಳ್ಳುವಿಕೆ, ಆಯ್ಕೆ, ಸುರಕ್ಷತೆ, ಬಳಕೆ,  ಪ್ರತಿನಿಧಿತ್ವ, ನ್ಯಾಯಿಕ ಹಕ್ಕು ಮಂಡನೆ, ಇತ್ಯಾದಿಗಳ ಕುರಿತು ಅತ್ಯಂತ ವಿಷಧವಾಗಿ ತಿಳಿಸುತ್ತಾ, ಗ್ರಾಹಕನ ಹಕ್ಕು:ಸಾರ್ವಕಾಲಿಕ, ಹಕ್ಕು ಮಂಡನೆ ನಿತ್ಯ ಕಾಯಕ: ಎಂಬ ನಿರ್ದಿಷ್ಟ ಘೋಷಣೆಯೊಂದಿಗೆ ತಿಳಿಸಿಕೊಟ್ಟರು.

ಮುಂದುವರೆದು, ಸದರಿ ವಿಚಾರ ಘೋಷ್ಠಿ ಯ ಪ್ರವಚನದಲ್ಲಿ, ಆಹಾರ ಸುರಕ್ಷತೆ ಗ್ರಾಹಕನ ಹಕ್ಕು ಹಾಗಾಗಿ, ಕಲಬೆರಕೆ ಆಹಾರ ಬಳಕೆಯನ್ನು ನಿಷೇದಿಸಿ ಎಂದು ವಿದ್ಯಾರ್ಥಿಗಳಿಗೆ ದೃಶ್ಯ-ಮಾಧ್ಯಮದಲ್ಲಿನ ಹಲವು ಜ್ವಲಂತ ಉದಾಹರಣೆಯೊಂದಿಗೆ ಕರೆ ಕೊಟ್ಟರು. ಇತ್ತೀಚಿಗೆ ನಿಷೇದಿಸಲ್ಪಟ್ಟ ಬಾಂಬೆ ಮಿಠಾಯಿ, ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಗಳಲ್ಲಿನ ಹಾನಿಕಾರಕ ರಾಸಾಯನಿಕ ಅಂಶಗಳ ದುಷ್ಪರಿಣಾಮದ ಕುರಿತು ವಿಸ್ತ್ರತವಾಗಿ ಜಾಗೃತಿ ಮೂಡಿಸಿದರು.

ನಂತರ, ವಿಶ್ವ ಜಲ ದಿನಾಚರಣೆಯ ದೃಷ್ಟಿಯಲ್ಲಿ, ಭವಿಷ್ಯದ ನೀರಿನ ನಿರ್ವಹಣೆ ಪರಿಗಣಿಸಿ ಪ್ರತಿಯೊಬ್ಬರೂ ಅವರ ಮನೆಯ ಚಾವಣಿಯನ್ನು ಸಮರ್ಪಕವಾಗಿ ಬಳಸಿಕೊಂಡು, ಮಳೆ ನೀರು ಕೊಯ್ಲು  (Roof-Top Rain Water Harvesting) ತಂತ್ರಜ್ಞಾನ ವನ್ನು  ಅಳವಡಿಸಿಕೊಂಡು ಮಳೆ ನೀರು ಸೇವನೆ ಮತ್ತು ಇತರ ಉದ್ದೇಶಗಳಾದ ಕೈತೋಟದ ನಿರ್ವಹಣೆ, ಶುದ್ದೀಕರಣ ಹಾಗು ಇತರೆ ದೈನಂದಿನ ಚಟುವಟಿಕೆಗಳಿಗೂ ಉಪಯೋಗವಾಗುತ್ತದೆ ಎಂದು ತಿಳಿಸಿಕೊಟ್ಟರು. ನೀರಿನಲ್ಲಿ ಕಂಡುಬರುವ ಫ್ಲೋರೈಡ್ ಮತ್ತು ಅರ್ಸೆನಿಕ್ ನಂತಹ ಗಂಭೀರ ಸಮಸ್ಯೆಗಳಿಗೆ ಮಳೆ ನೀರಿನ ಸೇವನೆ ಅತ್ಯಗತ್ಯ ಎಂದು ವಿದ್ಯಾರ್ಥಿಗಳ ಮೂಲಕ ಮಳೆ ನೀರು ಕೊಯ್ಲು ಅನುಷ್ಠಾನದ ಅಭಿಯಾನಕ್ಕೆ ಡಾ. ಜಿ ಪಿ ಮೂರ್ತಿಯವರು ಚಾಲನೆ ನೀಡಿ  ವಿದ್ಯಾರ್ಥಿಗಳಿಗೆ ಪ್ರತಿಜ್ಞಾ-ವಿಧಿ ಬೊಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ನಿವೃತ್ತ ಮುಖ್ಯ ಇಂಜಿನಿಯರ್ ಅದ ಶ್ರೀ ವಿಶ್ವನಾಥ್ ರವರು ನೀರಿನ ಸದ್ಭಳಕೆ ಮತ್ತು ನಿರ್ವಹಣೆ ಕುರಿತು ವೈಜ್ಞಾನಿಕ ಅಂಕಿ-ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಮುಂದುವರೆದು,  ಸಂಪನ್ಮೂಲ ವ್ಯಕ್ತಿಯಾಗಿ ಡಾ. ಜಿ. ಪಿ ಮೂರ್ತಿ ಯವರು ನೀಡಿದ ಪ್ರವಚನದಲ್ಲಿನ; ಗ್ರಾಹಕರ ಹಕ್ಕುಗಳು,  ಆಹಾರ ಸುರಕ್ಷತೆ  ಮತ್ತು ಕಲಬೆರಕೆ ಆಹಾರ ನಿಷೇದ ಹಾಗು ಮಳೆ ನೀರು ಕೊಯ್ಲು ಅಳವಡಿಕೆ ಸೇರಿದಂತೆ ಎಲ್ಲಾ ಅಂಶಗಳು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ವೃದ್ಧಿಗೆ ಹಾಗು ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ಪೂರಕ ಮತ್ತು ಪ್ರೇರಣಾ ಶಕ್ತಿಯಾಗಿದೆ ಎಂದು ಶ್ಲಾಘಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವಲಿಂಗೇ ಗೌಡರು ವಿದ್ಯಾರ್ಥಿಗಳಿಗೆ ವಿಶ್ವ ಗ್ರಾಹಕರ ಹಕ್ಕುಗಳ ಅಗತ್ಯತೆಯ ನಿರ್ದಿಷ್ಟತೆ ಬಗ್ಗೆ ಮಾತನಾಡಿದರು.

ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು  ಕಾಮರ್ಸ್ ವಿಭಾಗದ ಭೋಧಕರು ವಂದನಾರ್ಪಣೆ ಮಾಡಿದರು.

ಸದರಿ ಸಂಯುಕ್ತಾಶ್ರಯದ ಕಾರ್ಯಕ್ರಮದಲ್ಲಿ,   ಕೆ. ಪುಟ್ಟ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಬೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು, ಪದವಿ ವಿದ್ಯಾರ್ಥಿಗಳು ಹಾಜರಿದ್ದರು.

MGP ಯ ಕಾರ್ಯ ಪಡೆ ಸದಸ್ಯರಾದ  ಶಂಕರ್, ಖಜಾಂಚಿ ದಯಾನಂದ ಸಾಗರ್,  ಭಾನು ಪ್ರಶಾಂತ್, ರವಿ ಬಳೆ, ಸೋಮಶೇಖರ್, ರಾಘವೇಂದ್ರ, ಸೀತಾರಾಮ್, ರೂಪ ಪಾಲಾಕ್ಷ, ರೀಟಾ ಮದನ್ ಉಪಸ್ಥಿತರಿದ್ದರು.

ಹಿಂದಿನ ಲೇಖನಮಂಡ್ಯ ಕ್ಷೇತ್ರಕ್ಕೆ ಕುಮಾರಣ್ಣನೇ ಮೈತ್ರಿ ಅಭ್ಯರ್ಥಿ: ಸಿ.ಎಸ್‌ ಪುಟ್ಟರಾಜು
ಮುಂದಿನ ಲೇಖನಅದ್ಧೂರಿಯಾಗಿ ನಡೆದ ಮೇಲುಕೋಟೆ ವೈರಮುಡಿ ಉತ್ಸವ