ಮನೆ ಸುದ್ದಿ ಜಾಲ ಬೈಕ್‌ಗೆ ಕಂಟೇನರ್ ಡಿಕ್ಕಿ; ತಾಯಿ-ಮಗ ಸ್ಥಳದಲ್ಲೇ ಸಾವು..!

ಬೈಕ್‌ಗೆ ಕಂಟೇನರ್ ಡಿಕ್ಕಿ; ತಾಯಿ-ಮಗ ಸ್ಥಳದಲ್ಲೇ ಸಾವು..!

0

ಬೆಂಗಳೂರು : ರಸ್ತೆ ಅಪಘಾತದಲ್ಲಿ ತಾಯಿ-ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದಿದೆ. ಅಶ್ವಿನಿ, ಅಭಿಲಾಷ್ ಮೃತ ಅಮ್ಮ-ಮಗ ಎಂದು ಗುರುತಿಸಲಾಗಿದೆ.

ಬೈಕ್‌ಗೆ ಕಂಟೇನರ್ ಡಿಕ್ಕಿಯಾದ ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ತಾಯಿ-ಮಗ ಇಬ್ಬರೂ ಕೂಡ ಹೆಲ್ಮೆಟ್ ಧರಿಸಿರಲಿಲ್ಲ. ಘಟನೆಯಲ್ಲಿ ಇಬ್ಬರಿಗೂ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಈ ಘಟನ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.