ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ ನಾಲ್ಕರ ನೆಲಮಂಗಲದ ಬಳಿ ಕಂಟೇನರ್ ವೊಂದು ವೋಲ್ವೋ ಕಾರಿನ ಮೇಲೆ ಬಿದ್ದು ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ.
ಮೃತರ ವಿವರ ಲಭ್ಯವಾಗಿಲ್ಲ. ಕಾರಿನಲ್ಲಿ ವಿಜಯಪುರ ಮೂಲದವರು ಎಂದು ಹೇಳಲಾಗಿದೆ. ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗುತ್ತಿದೆ.
ಮಾಲೀಕರು ಎರಡು ತಿಂಗಳ ಹಿಂದಷ್ಟೇ ವೋಲ್ವೋ ಕಾರು ಖರೀದಿಸಿದ್ದರು. ನೆಲಮಂಗಲ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.