Saval TV on YouTube
ಸುರತ್ಕಲ್: ಸಮೀಪದ ಹೊನ್ನಕಟ್ಟೆ ಜಂಕ್ಷನ್ ಬಳಿ ಕಂಟೇನರ್ ವಾಹನವೊಂದು ನಿಯಂತ್ರಣ ತಪ್ಪಿ ಡಿವೈಡರ್ ಹಾರಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುವ ಸಂದರ್ಭ ಕುಳಾಯಿ ಜಂಕ್ಷನ್ ನಲ್ಲಿ ಸಿಗ್ನಲ್ ಹಾಕಿದ ವೇಳೆ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಎರಡು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಓರ್ವ ಪಾದಾಚಾರಿ ಮಹಿಳೆಗೆ ಹಾಗೂ ದ್ವಿಚಕ್ರ ಸವಾರನಿಗೆ ಗಾಯವಾಗಿದೆ.
ಮಂಗಳೂರು ಉತ್ತರ ಸಂಚಾರಿ ಪೊಲೀಸರು ಆಗಮಿಸಿ ಟ್ರಾಫಿಕ್ ಸಂಚಾರ ನಿಯಂತ್ರಿಸಿದರು.














