ಮನೆ ರಾಜ್ಯ ಮುಂದುವರಿದ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ

ಮುಂದುವರಿದ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ

0

ಮಡಿಕೇರಿ(Madikeri): ಜಿಲ್ಲೆಯಾದ್ಯಾಂತ ಶುಕ್ರವಾರವೂ ಮಳೆ, ಗಾಳಿ ಮುಂದುವರೆದಿದ್ದು, ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ನಾಪೋಕ್ಲು- ಭಾಗಮಂಡಲ ರಸ್ತೆ ಹೊಳೆಯಂತಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ‌. ಭಾಗಮಂಡಲ- ಮಡಿಕೇರಿ ರಸ್ತೆಯಲ್ಲೂ ಒಂದು ಅಡಿಯಷ್ಟು ನೀರು ಹರಿಯುತ್ತಿದೆ.

ಮಡಿಕೇರಿ ತಾಲೂಕಿನ ಬಲ್ಲಮಾವಟಿಯಲ್ಲಿ 15 ಸೆಂ.ಮೀ, ಭಾಗಮಂಡಲದಲ್ಲಿ 14 ಸೆಂ.ಮೀ ಮಳೆಯಾಗಿದ್ದು, ಸೋಮವಾರಪೇಟೆ ತಾಲ್ಲೂಕಿನ ದೊಡ್ಡಬ್ಬೂರು ಗ್ರಾಮದ ರೇಖಾ ಅವರ ಮನೆ, ಕುಮಾರಹಳ್ಳಿ ಗ್ರಾಮದ ಎಂ.ಟಿ.ಮೇದಪ್ಪ ಅವರ ಮನೆಗಳಿಗೆ ಹಾನಿಯಾಗಿದೆ.

ಹಾರಂಗಿ ಜಲಾಶಯಕ್ಕೆ 13,603 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 15,500 ಕ್ಯುಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.

ಹಿಂದಿನ ಲೇಖನಬೆಂಗಳೂರು ಆಧಾರ್​ ಕೇಂದ್ರದಲ್ಲಿದೆ ಕೆಲಸ ಖಾಲಿ ಇದೆ
ಮುಂದಿನ ಲೇಖನಮೂರನೇ ಆಷಾಡ ಶುಕ್ರವಾರ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ತಾಯಿ ಚಾಮುಂಡೇಶ್ವರಿ