ಮನೆ ರಾಜ್ಯ ನಿರಂತರ ಮಳೆ: ಮನೆ ಮೇಲ್ಛಾವಣಿ, ಗೋಡೆ ಕುಸಿತ

ನಿರಂತರ ಮಳೆ: ಮನೆ ಮೇಲ್ಛಾವಣಿ, ಗೋಡೆ ಕುಸಿತ

0

ಮೈಸೂರು(Mysuru): ಜಿಲ್ಲೆಯ ಹುಣಸೂರು ತಾಲ್ಲೂಕಿನಾದ್ಯಾಂತ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹನಗೋಡು ಹೋಬಳಿಯ ಭರತವಾಡಿಯಲ್ಲಿ ಮನೆ ಮೇಲ್ಛಾವಣಿ, ಗೋಡೆ ಕುಸಿದು ಬಿದ್ದಿದೆ.

ಆದಿವಾಸಿ ಕುಮಾರಿ ಎಂಬುವವರ ಮನೆ ಮೇಲ್ಛಾವಣಿ ಸಹಿತ ಗೋಡೆ ಕುಸಿದು ಬಿದ್ದಿದ್ದು, ಮೇಲ್ಛಾವಣಿ ಬೀಳುವ ವೇಳೆ ಜೋರು ಶಬ್ಧ ಉಂಟಾಗಿದ್ದರಿಂದ ಮನೆ ಮಂದಿ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿದ್ದ ದವಸ ಧಾನ್ಯ, ಪಾತ್ರೆಗಳು ಮಣ್ಣಿನಡಿ ಸಿಲುಕಿ ಸಂಪೂರ್ಣ ಹಾಳಾಗಿವೆ.

ಮಳೆಹಾನಿಗೊಳಗಾದ ಕುಟುಂಬಕ್ಕೆ ತಾಲ್ಲೂಕು ಆಡಳಿತದಿಂದ ತಕ್ಷಣವೇ ಪರಿಹಾರ ನೀಡಬೇಕು.  ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಬರಬೇಕೆಂದು ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮನವಿ ಮಾಡಿದ್ದಾರೆ.

ಹಿಂದಿನ ಲೇಖನಗೌರಿ ಲಂಕೇಶ್ ಹತ್ಯೆ ಪ್ರಕರಣ: ನವೀನ್‌ರನ್ನು ಸಿಲುಕಿಸಲು ಪೊಲೀಸರ ಜೊತೆ ಸೇರಿ ಸುಳ್ಳು ಕತೆ ಹೆಣೆದ ಆರೋಪ ತಳ್ಳಿಹಾಕಿದ ಶಬ್ಬೀರ್‌
ಮುಂದಿನ ಲೇಖನನಿರಂಜನ ಮಠದ ಪ್ರವೇಶಕ್ಕೆ ನಿರಾಕರಣೆ: ಪ್ರತಿಭಟನೆ