ಮೈಸೂರು(Mysuru): ವಿಶ್ವ ಪರಿಸರ ಸಂರಕ್ಷಣಾ ದಿನ ಅಂಗವಾಗಿ ಪ್ಲ್ಯಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧದ ಬಗ್ಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ನಗರದ ವಿವಿಧ ಕಡೆ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಬಟ್ಟೆ ಬ್ಯಾಗ್ ಹಾಗೂ ಜಾಗೃತಿ ವುಳ್ಳ ಕರ ಪತ್ರವನ್ನು ನೀಡಿ ಜನಜಾಗೃತಿ ಮೂಡಿಸಿದರು
ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜ್ ನೇತೃತ್ವದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಎಂ ಜಿ ರಸ್ತೆಯಲ್ಲಿರುವ ತರಕಾರಿ ಮಾರ್ಕೆಟಿನಲ್ಲಿ ಗ್ರಾಹಕರಿಗೂ ಹಾಗೂ ವ್ಯಾಪಾರಸ್ಥರಿಗು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಹಿಂದಿನ ಕಾಲದಂತೆ ಈ ಕಾಲದಲ್ಲೂ ನಾವು ಬಟ್ಟೆಯಲ್ಲಿ ಹೆಣೆದ ಅಥವಾ ಬಟ್ಟೆಯ ಕೈ ಚೀಲಗಳನ್ನು ಹಿಡಿದು ಮಾರುಕಟ್ಟೆಗೆ ಹೋಗುವುದನ್ನು ರೂಢಿ ಮಾಡಿಕೊಳ್ಳುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಹೇಳಿದರು.
ಇಂದು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ ಪರಿಸರದ ಮೇಲೂ ಕೂಡ ಪರಿಣಾಮ ಬಿರಲಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಬ್ಯಾಗ್ ಬಳಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಬಟ್ಟೆ ಕೈ ಚೀಲಗಳನ್ನು ಬಳಕೆ ಮಾಡಿ ಪರಿಸರದ ಜತೆ ಜೀವ ವೈವಿದ್ಯತೆ ಸಂರಕ್ಷಿಸಲು ಜನರು ಮುಂದಾಗಬೇಕು, ಪರಿಸರ ಸಂರಕ್ಷಣಾ ಕಾನೂನು 1986ರ ಅಡಿಯಲ್ಲಿ 40 ಮೈಕ್ರಾನ್ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆಗೆ ನಿಷೇಧವಿದ್ದು, ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.
40 ಮೈಕ್ರಾನ್ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸಿದರೆ, ಅದರಲ್ಲಿರುವ ವಿಷಕಾರಿ ಟಾಕ್ಸಿನ್ ಎನ್ನುವ ರಾಸಾಯನಿಕ ಅಂಶವು ನೀರು, ಭೂಮಿ ಹಾಗೂ ಗಾಳಿಯಲ್ಲಿ ಸೇರಿಕೊಂಡು ನಮ್ಮ ಅನಾರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿಯಾದ ಬಟ್ಟೆಯ ಬ್ಯಾಗ್‌ಗಳನ್ನು ಎಲ್ಲರೂ ಬಳಸೋಣ ಎಂದರು
ನಂತರ ಮಾತನಾಡಿದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ರವಿಶಂಕರ್, ನಿಷೇಧಕ್ಕೆ ಒಳಗಾಗಿರುವ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆಯನ್ನು ನಾವೆಲ್ಲರೂ ಹಂತ ಹಂತವಾಗಿ ಕಡಿಮೆ ಮಾಡಬೇಕಾದ ತುರ್ತು ಇದೆ. ನಿರ್ಲಕ್ಷಿಸಿದರೆ ನಮ್ಮ ಪರಿಸರವು ಪ್ಲಾಸ್ಟಿಕ್ ಮಾಲಿನ್ಯದಿಂದ ನಾಶವಾಗುವುದಕ್ಕೆ ನಾವೇ ಕಾರಣವಾಗುತ್ತೇವೆ ಎಂದರು.
ಸ್ಥಳಿಯ ಹೆಲ್ತ್ ಇನ್ಸ್ ಪೆಕ್ಟರ್ ತೇಜಸ್ವಿನಿ ಅವರು ದೊಡ್ಡ ಮಾರ್ಕೆಟ್ ನಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿ ಮಾಲೀಕ ಸ್ಥಳದಲ್ಲೇ 12000 ರೂ ದಂಡ ವಿಧಿಸಿ ಜಾಗೃತಿ ಮೂಡಿಸಿದರು.
ಎಂ ಜಿ ರಸ್ತೆಯ ತರಕಾರಿ ಮಾರ್ಕೆಟ್ ,ದೊಡ್ಡ ಮಾರ್ಕೆಟ್, ಚಿಕ್ಕ ಮಾರ್ಕೆಟ್, ಕೆ ಟಿ ಸ್ಟ್ರೀಟ್, ಲ್ಯಾನ್ಸ್ ಡೌನ್ ಬಿಲ್ಡಿಂಗ್ ,ಹಳೆ ಸಂತೆಪೇಟೆ ಸುತ್ತಮುತ್ತಲಿನ ಅಂಗಡಿಗಳಿಗೆ ತೆರಳಿ ವ್ಯಾಪಾರಿಗಳಿಗೆ ಮತ್ತು ಜನರಿಗೆ ಬಟ್ಟೆ ಚೀಲ ಬಳಕೆ ಮಾಡುವಂತೆ ಮನವಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕೆ ಆರ್ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರಾಚಯ್ಯ , ದೇವರಾಜ ಮಾರ್ಕೆಟಿನ ಹೆಲ್ತ್ ಇನ್ಸ್ ಪೆಕ್ಟರ್ ತೇಜಶ್ವಿನಿ , ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಅಧ್ಯಕ್ಷ ರವಿಶಂಕರ್ , ನಗರಪಾಲಿಕೆ ಸದಸ್ಯ ಜಗದೀಶ , ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಪ್ರಚಾರ ಪ್ರಮುಖ್ ಸುಮಾ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಪೂರ್ವ ಸುರೇಶ್, ಸುರೇಶ್ ಗೋಲ್ಡ್ , ಶಿವರಾಜ್ ,ಸುಚೀಂದ್ರ, ಬಸವರಾಜ್ ಬಸಪ್ಪ ಪಾಲ್ಗೊಂಡಿದ್ದರು.