ಬೆಂಗಳೂರು: ಮತದಾನಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಪ್ರಮುಖ 10 ರೈಲುಗಳಿಗೆ ಹೆಚ್ಚುವರಿಯಾಗಿ ಬೋಗಿಗಳನ್ನು ಅಳವಡಿಸಲಾಗಿದೆ. ಶತಾಬ್ದಿ, ಕಾರವಾರ್ ಎಕ್ಸ್‌ಪ್ರೆಸ್, ವಾಸ್ಕೋ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್ ರೈಲುಗಳು ಹೆಚ್ಚುವರಿ ಬೋಗಿಯೊಂದಿಗೆ ಮೇ 9 ಹಾಗೂ 10 ರಂದು ಓಡಾಟ ನಡೆಸಲಿವೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಪ್ರಮುಖ 10 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ.
ಮೇ 10 ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಹಲವೆಡೆ ವಲಸೆ ತೆರಳಿರುವ ಮತದಾರರು ಅಂದು ತಮ್ಮ ಊರುಗಳಿಗೆ ತೆರಳಿ ಮತದಾನ ಮಾಡಲು ಸಜ್ಜಾಗಿದ್ದಾರೆ. ಅಂತಹ ಪ್ರಯಾಣಿಕರಿಗಾಗಯೇ ಮೇ 9 ಹಾಗೂ 10 ರಂದು ಜನ್ ಶತಾಬ್ದಿ ಸೇರಿ ಪ್ರಮುಖ ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳಿರಲಿದೆ.
ಹುಬ್ಬಳ್ಳಿ ರೈಲ್ವೆ ಮಾರ್ಗದಲ್ಲಿ ದ್ವಿಪಥ, ವಿದ್ಯುತೀಕರಣ ಕಾಮಗಾರಿ ಪೂರ್ಣ: ಶೀಘ್ರದಲ್ಲೇ ಪ್ರಯಾಣಕ್ಕೆ ಮತ್ತಷ್ಟು ವೇಗ
ಯಾವ್ಯಾವ ರೈಲುಗಳಿಗೆ ಹೆಚ್ಚುವರಿ ಬೋಗಿ?ಮೈಸೂರು – ಬಾಗಲಕೋಟ ಬಸವಾ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 17307 ) – ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಅಳವಡಿಸಲಾಗಿದೆ. ಈ ರೈಲು ಮಧ್ಯಾಹ್ನ 1.30ಕ್ಕೆ ಮೈಸೂರಿನಿಂದ ಹೊರಟು ಬೆಂಗಳೂರು ಮಾರ್ಗವಾಗಿ ಮರು ದಿನ ಬಾಗಲಕೋಟೆ ತಲುಪಲಿದೆ. ಮೇ 9 ರಂದು ಹೆಚ್ಚುವರಿ ಬೋಗಿ ಇರಲಿದೆ.
ಬಾಗಲಕೋಟ-ಮೈಸೂರು ಬಸವಾ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 17308 ) – ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಅಳವಡಿಸಲಾಗಿದೆ. ಈ ರೈಲು ಮಧ್ಯಾಹ್ನ 2.35ಕ್ಕೆ ಬಾಗಲಕೋಟೆಯಿಂದ ಹೊರಟು ಬೆಂಗಳೂರು ಮಾರ್ಗವಾಗಿ ಮರು ದಿನ ಮೈಸೂರಿಗೆ ತಲುಪಲಿದೆ. ಮೇ 10 ರಂದು ಹೆಚ್ಚುವರಿ ಬೋಗಿ ಇರಲಿದೆ.
ಕೆಎಸ್‌ಆರ್ ಬೆಂಗಳೂರು – ನಾಂದೇಡ್ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 16593 ಒಂದು ಸ್ಪೀಪರ್ ಬೋಗಿಯನ್ನು ಅಳವಡಿಸಲಾಗಿದೆ. ಮೇ 9 ರಂದು ಹೆಚ್ಚುವರಿ ಬೋಗಿ ಅಳವಡಿಕೆ
ನಾಂದೇಡ್ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 16594 ) ಒಂದು ಸ್ಪೀಪರ್ ಬೋಗಿಯನ್ನು ಅಳವಡಿಸಲಾಗಿದೆ. ಮೇ 10 ರಂದು ಹೆಚ್ಚುವರಿ ಬೋಗಿ ಅಳವಡಿಕೆ.
ಶತಾಬ್ದಿ ರೈಲಿಗೂ ಹೆಚ್ಚುವರಿ ಬೋಗಿಕೆ
ಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ಜನ್‌ಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 12079 ) ಒಂದು ಸಿಟ್ಟಿಂಗ್ ಬೋಗಿ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಮೇ 9 ಹಾಗೂ 10 ರಂದು ಹೆಚ್ಚುವರಿ ಬೋಗಿ ಅಳಡಿಕೆಯಾಗಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಜನ್‌ಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 12080 ) ಒಂದು ಸಿಟ್ಟಿಂಗ್ ಬೋಗಿ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಮೇ 9 ಹಾಗೂ 10 ರಂದು ಹೆಚ್ಚುವರಿ ಬೋಗಿ ಅಳಡಿಕೆಯಾಗಲಿದೆ.
ಕರ್ನಾಟಕ ಗೋವಾ ರೈಲು
ವಾಸ್ಕೋ-ಡ-ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್ ( ರೈಲು ಗಾಡಿ ಸಂಖ್ಯೆ 17309 ) ಎರಡನೇ ದರ್ಜೆಯ ಒಂದು ಸ್ಲೀಪರ್ ಬೋಗಿಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಮೇ 9 ರಂದು ಹೆಚ್ಚುವರಿ ಬೋಗಿ ಅಳವಡಿಕೆ.
ಯಶವಂತಪುರ – ವಾಸ್ಕೋ-ಡ-ಗಾಮ ( ರೈಲು ಗಾಡಿ ಸಂಖ್ಯೆ 17310 ) ಎರಡನೇ ದರ್ಜೆಯ ಒಂದು ಸ್ಲೀಪರ್ ಬೋಗಿಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಮೇ 10 ರಂದು ಹೆಚ್ಚುವರಿ ಬೋಗಿ ಅಳವಡಿಕೆ.
ಕಾರವಾರ ಎಕ್ಸ್‌ಪ್ರೆಸ್ ರೈಲು
ಕೆಎಸ್ಆರ್ ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್ ( ರೈಲು ಗಾಡಿ ಸಂಖ್ಯೆ 16595 ) , ಕಾರವಾರ – ಕೆಎಸ್ಆರ್ ಬೆಂಗಳೂರು ( ರೈಲು ಗಾಡಿ ಸಂಖ್ಯೆ 16596) ಈ ರೈಲುಗಳಿಗೆ ಸಂಚರಿಸುವ ದಿನಗಳಂದು ಒಂದು ದ್ವಿತೀಯ ದರ್ಜೆ ಸ್ಲೀಪರ್ ಬೋಗಿಯನ್ನು ಹೆಚ್ಚುವರಿಯಾಗಿ ಅಳಡಿಸಲಾಗಿದೆ.