ಮನೆ ಅಪರಾಧ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಾಲಕನ ಬಂಧನ

ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಾಲಕನ ಬಂಧನ

0

ನವದೆಹಲಿ: ಪಾಕಿಸ್ತಾನಕ್ಕೆ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿ ರವಾನಿಸಿದ ಆರೋಪದ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಭದ್ರತಾ ಏಜೆನ್ಸಿಗಳ ಸಹಾಯದಿಂದ ದೆಹಲಿ ಪೊಲೀಸರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಾಲಕನನ್ನು ಬಂಧಿಸಿದ್ದಾರೆ.

ಪಾಕಿಸ್ತಾನದ ಐಎಸ್‌ಐ ಹನಿಟ್ರ್ಯಾಪ್​ ಖೆಡ್ಡಾಕ್ಕೆ ಈತ ಬಿದ್ದಿದ್ದ ಎಂದು ವರದಿಯಾಗಿದೆ.

ಚಾಲಕ ಹೇಗೆ ಐಎಸ್ಐ ಜಾಲಕ್ಕೆ ಬಿದ್ದಿದ್ದಾನೆ, ಅದರಲ್ಲಿ ಭಾರತದಲ್ಲಿ ನೆಲೆಸಿರುವವರ ಕೈವಾಡ ಇದೆಯೇ, ಅಥವಾ ಯಾವ ಮಾಹಿತಿಗಳನ್ನು ಆತ ಪಾಕಿಸ್ತಾನಕ್ಕೆ ನೀಡಿದ್ದಾನೆ ಮುಂತಾದ ಸಂಗತಿಗಳನ್ನು ಬಯಲಿಗೆಳೆಯಲು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮತ್ತಷ್ಟು ಉದ್ಯೋಗಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಅನುಮಾನದಡಿ ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಆದರೆ ಈ ಬಗ್ಗೆ ಎಂಇಎ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಎಂಇಎ ಚಾಲಕನನ್ನು ಜವಾಹರಲಾಲ್ ನೆಹರು ಭವನದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಪೂನಂ ಶರ್ಮಾ ಅಥವಾ ಪೂಜಾ ಎಂಬ ಮಹಿಳೆಯ ಸೋಗಿನಲ್ಲಿ ನಟಿಸುತ್ತಾ, ಚಾಲಕನನ್ನು ಬಲೆಗೆ ಹಾಕಿಕೊಂಡಿದ್ದ ಪಾಕಿಸ್ತಾನದ ಬೇಹುಗಾರ್ತಿಗೆ ಹಣದ ಆಸೆಗಾಗಿ ರಹಸ್ಯ ಮಾಹಿತಿ ಹಾಗೂ ದಾಖಲೆಗಳನ್ನು ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ.