ಮನೆ ಅಪರಾಧ ಕದ್ದ ಬೈಕ್ ಗಳಿಗೆ ನಕಲಿ ದಾಖಲೆ ಸೃಷ್ಠಿಸಲು ಬ್ರೋಕರ್ ಗೆ ಸಹಕಾರ: ಆರ್ ಟಿಓ ಕಚೇರಿಯ...

ಕದ್ದ ಬೈಕ್ ಗಳಿಗೆ ನಕಲಿ ದಾಖಲೆ ಸೃಷ್ಠಿಸಲು ಬ್ರೋಕರ್ ಗೆ ಸಹಕಾರ: ಆರ್ ಟಿಓ ಕಚೇರಿಯ ನಾಲ್ವರ ಬಂಧನ

0

ದಾವಣಗೆರೆ: ಕದ್ದ ಬೈಕ್‌ ಗಳಿಗೆ ನಕಲಿ ದಾಖಲೆ ಸೃಷ್ಟಿಸಲು ಬ್ರೋಕರ್‌ ಗೆ ಸಹಕರಿಸಿದ ಆರೋಪದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ ಟಿಒ) ನಾಲ್ವರು ಸಿಬ್ಬಂದಿಯನ್ನು ಸೈಬರ್‌ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ನಗರದ ಆರ್‌ ಟಿಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾದ (ಎಸ್‌ ಡಿಎ) ಜಗದೀಶ್, ಪ್ರದೀಪ್, ವಸಂತಕುಮಾರ್, ಶಶಿಕುಮಾರ್ ಬಂಧಿತರು.

ಹೊನ್ನಾಳಿ ಠಾಣೆ ಪೊಲೀಸರು ಬೈಕ್‌ ಕಳವು ಪ್ರಕರಣದ ತನಿಖೆ ನಡೆಸುತ್ತಿದ್ದಾಗ ನಕಲಿ ದಾಖಲೆ ಸೃಷ್ಟಿಸಿರುವ ವಿಷಯ ಬೆಳಕಿಗೆ ಬಂದಿದೆ. ನಿಜವಾದ ಮಾಲೀಕರ ಗಮನಕ್ಕೆ ತಾರದೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೈಕ್‌ ಗಳನ್ನು ಮತ್ತೊಬ್ಬರ ಹೆಸರಿಗೆ ವರ್ಗಾಯಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಬಸವನಗರ ಠಾಣೆಯಲ್ಲಿ 10 ಪ್ರಕರಣಗಳನ್ನು ದಾಖಲಿಸಲಾಗಿದೆ.

ಸೈಬರ್‌ ಠಾಣೆ ಪೊಲೀಸರು ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಿದಾಗ ಬೈಕ್‌ ಗಳ ಮಾಲೀಕರ ಬದಲು ಬ್ರೋಕರ್‌ ರಸೂಲ್ ಎಂಬುವರು ಸಹಿ ಮಾಡಿರುವುದು ಗೊತ್ತಾಗಿದೆ. ಆರೋಪಿ ರಸೂಲ್‌ ಹಾಗೂ ಆತನಿಗೆ ಸಹಕರಿಸಿದ ನಾಲ್ವರು ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

ಹಿಂದಿನ ಲೇಖನ“ಬ್ಯಾಂಗ್” ಚಿತ್ರದ ಟ್ರೇಲರ್ ರಿಲೀಸ್
ಮುಂದಿನ ಲೇಖನರಾಮನ್ ರಿಸರ್ಚ್ ಇನ್‌ ಸ್ಟಿಟ್ಯೂಟ್: 3 ಸಂಶೋಧನಾ ಸಹಾಯಕ ಹುದ್ದೆಗಳಿಗೆ ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ