ಮನೆ ಉದ್ಯೋಗ ಸಹಕಾರ ಇಲಾಖೆ ನಿರೀಕ್ಷಕರು ಹುದ್ದೆಗಳ ಅರ್ಜಿಗೆ ಲಿಂಕ್ ಬಿಡುಗಡೆ: ಅಪ್ಲಿಕೇಶನ್ ಹಾಕುವ ವಿಧಾನ ಇಲ್ಲಿದೆ

ಸಹಕಾರ ಇಲಾಖೆ ನಿರೀಕ್ಷಕರು ಹುದ್ದೆಗಳ ಅರ್ಜಿಗೆ ಲಿಂಕ್ ಬಿಡುಗಡೆ: ಅಪ್ಲಿಕೇಶನ್ ಹಾಕುವ ವಿಧಾನ ಇಲ್ಲಿದೆ

0

ಕೆಪಿಎಸ್’ಸಿ ಇತ್ತೀಚೆಗೆ ಸಹಕಾರ ಇಲಾಖೆಯ ಸಹಕಾರ ಸಂಘಗಳ 47 ನಿರೀಕ್ಷಕರು ಪೋಸ್ಟ್’ಗಳಿಗೆ ಅಧಿಸೂಚಿಸಿತ್ತು. ಸದರಿ ಹುದ್ದೆಗಳಿಗೆ ಆನ್ಲೈನ್ ಅಪ್ಲಿಕೇಶನ್ ಹಾಕಲು ಇದೀಗ ಲಿಂಕ್ ಬಿಡುಗಡೆ ಮಾಡಿದೆ. ಆಸಕ್ತರು ಏಪ್ರಿಲ್ 30 ರ ರಾತ್ರಿ 11-59 ಗಂಟೆಯೊಳಗೆ ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

ಹುದ್ದೆ ವಿವರ

ಸಹಕಾರ ಸಂಘಗಳ ನಿರೀಕ್ಷಕರು: 47

ಶೈಕ್ಷಣಿಕ ಅರ್ಹತೆ : ಅಗ್ರಿಕಲ್ಚರಲ್ ಸೈನ್ಸ್, ಮಾರ್ಕೆಟಿಂಗ್ ಅಂಡ್ ಕೋಆಪರೇಷನ್, ಕಾಮರ್ಸ್ ಅಂಡ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಗ್ರಿ ಪಾಸ್.

ವೇತನ ಶ್ರೇಣಿ : ರೂ.27,650-52,650

ಹುದ್ದೆಗಳ ಕುರಿತು ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.

ಅರ್ಜಿ ಸಲ್ಲಿಸುವ ವಿಧಾನ

ನಿರೀಕ್ಷಕರು ಹುದ್ದೆಗೆ ಅರ್ಜಿ ಸಲ್ಲಿಸುವಾಗ ಪ್ರಮುಖವಾಗಿ 3 ಹಂತಗಳಿವೆ.

ಮೊದಲನೇ ಹಂತ : ಪ್ರೊಫೈಲ್ ಕ್ರಿಯೇಟ್ / ಅಪ್ಡೇಟ್

ಎರಡನೇ ಹಂತ : ಅಪ್ಲಿಕೇಶನ್ ಸಬ್ಮಿಷನ್

ಮೂರನೇ ಹಂತ : ಅಪ್ಲಿಕೇಶನ್ ಶುಲ್ಕ ಪಾವತಿ ಮಾಡುವುದು.

ನಿರೀಕ್ಷಕರು ಹುದ್ದೆಗೆ ಅರ್ಜಿ ಸಲ್ಲಿಕೆ ಹೇಗೆ?

• ಆಯೋಗದ ವೆಬ್ಸೈಟ್ ‘http://www.kpsc.kar.nic.in/’ ಗೆ ಭೇಟಿ ನೀಡಿ.

• ಓಪನ್ ಆದ ಪೇಜ್ ನಲ್ಲಿ ‘Apply Online for Various Notifications’ ಎಂದಿರುವಲ್ಲಿ ಕ್ಲಿಕ್ ಮಾಡಿ.

• ನಂತರ ಓಪನ್ ಆಗುವ ಪೇಜ್ನಲ್ಲಿ’ CLICK HERE TO APPLY ONLINE FOR THE POST OF 47-RPC CO-OPERATIVE SOCIETY INSPECTOR IN THE DEPARTMENT OF CO-OPERATION’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.

• ಈಗಾಗಲೇ ಕೆಪಿಎಸ್ಸಿ ವೆಬ್ನಲ್ಲಿ ರಿಜಿಸ್ಟ್ರೇಷನ್ ಮಾಡಿದ್ದಲ್ಲಿ, ‘Login’ ಎಂಬಲ್ಲಿ ಕ್ಲಿಕ್ ಮಾಡಿ.

• ನಂತರ ಯೂಸರ್ ನೇಮ್, ಪಾಸ್ವರ್ಡ್ ನೀಡಿ ಲಾಗಿನ್ ಆಗುವ ಮೂಲಕ ಅಪ್ಲಿಕೇಶನ್ ಸಲ್ಲಿಸಬಹುದು.

• ಇದೇ ಮೊದಲ ಬಾರಿ ಕೆಪಿಎಸ್ಸಿ ನೇಮಕಾತಿಗೆ ಅರ್ಜಿ ಸಲ್ಲಿಸುತ್ತಿದ್ದಲ್ಲಿ, ‘Register’ ಎಂದಿರುವ ಲಿಂಕ್ ಕ್ಲಿಕ್ ಮಾಡಿ, ಪ್ರೊಫೈಲ್ ಕ್ರಿಯೇಟ್ ಮಾಡಿ.

•  ನಂತರ ಪುನಃ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.

• ಶುಲ್ಕ ಪಾವತಿ ನಂತರ, ಮುಂದಿನ ರೆಫರೆನ್ಸ್ಗಾಗಿ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿ ಶುಲ್ಕ ಎಷ್ಟು?

• ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ರೂ.600.

• ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.

• ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50

• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ.

ಅಪ್ಲಿಕೇಶನ್ ಹಾಕಲು ಆರಂಭಿಕ ದಿನಾಂಕ : 30-03-2023

• ಅಪ್ಲಿಕೇಶನ್ ಹಾಕಲು ಕೊನೆ ದಿನಾಂಕ : 30-04-2023

•  ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 02-05-2023

ಹಿಂದಿನ ಲೇಖನಈ ರಾಶಿಯವರು ನಿಮ್ಮ ಜೀವನದುದ್ದಕ್ಕೂ ಬೆಸ್ಟ್ಫ್ರೆಂಡ್ ಆಗಿರುತ್ತಾರೆ..!
ಮುಂದಿನ ಲೇಖನಬ್ಯುಸಿನೆಸ್ ಸ್ಟಡಿ ಓದಿದವರಿಗೆ ಯಾವ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿವೆ ಗೊತ್ತೇ?