ಮನೆ ಅಪರಾಧ 88 ಲಕ್ಷ ಮೌಲ್ಯದ ಕಾಪರ್​ ಸ್ಕ್ರಾಪ್​​ ಕಳ್ಳತನ: ಆರೋಪಿಗಳ ಬಂಧನ

88 ಲಕ್ಷ ಮೌಲ್ಯದ ಕಾಪರ್​ ಸ್ಕ್ರಾಪ್​​ ಕಳ್ಳತನ: ಆರೋಪಿಗಳ ಬಂಧನ

0

ಚಿಕ್ಕಮಗಳೂರು: ಜಿಲ್ಲೆಯ ನಗರ ಸೇರಿದಂತೆ ಹಾಗೂ ಹೊರ ವಲಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇದರ ಬೆನ್ನಲ್ಲೇ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Join Our Whatsapp Group

ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ರಾಂಪುರದಲ್ಲಿರುವ ತಮ್ಮ ಮಾಲೀಕತ್ವದ ಮೈಲುತುತ್ತು (ಕಾಪರ್ ಸಲ್ಫೇಟ್) ತಯಾರಿಕಾ ಘಟಕದಲ್ಲಿ ಕೆಲಸವನ್ನು ಮಾಡುತ್ತಿದ್ದ ಇಬ್ಬರು ಸುಮಾರು 16,320. ಕೆ.ಜಿಯಷ್ಟು ಕಾಪರ್​ ಸ್ಕ್ರಾಪ್​ನ್ನು ಕಳ್ಳತನ ಮಾಡಿದ್ದಾರೆ ಎಂದು ಪ್ರಭಾಕರ್ ಎಂಬುವವರು ದೂರು ನೀಡಿದ್ದರು.

ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿದ ಜಿಲ್ಲಾ ಪೊಲೀಸ್​ ಇಲಾಖೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ಸಿಂದಗಿ ತಾಲೂಕಿನ ರಾಜಕುಮಾರ, ಗೌರೀಶ, ಹುಬ್ಬಳ್ಳಿಯ ಮಹಮ್ಮದ್ ಜುನೈದ್​ ಇವರನ್ನು ಬಂಧಿಸಲಾಗಿದೆ.

ಬಂಧಿತರಿಂದ 88,21,750 ರೂ ಮೌಲ್ಯದ 12,425 ಕೆ.ಜಿ ಕಾಪರ್​ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಮಿನಿ ಆಂಬ್ಯುಲೆನ್ಸ್​ ಮತ್ತು ಅಶೋಕ್ ಲೇಲ್ಯಾಂಡ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಈ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳನ್ನು ಮೇಲಧಿಕಾರಿಗಳು ಶ್ಲಾಘಿಸಿದ್ದಾರೆ.