ಮನೆ ರಾಜ್ಯ ಕೇಂದ್ರ, ರಾಜ್ಯ ಸರ್ಕಾರದ ಶವಯಾತ್ರೆ ವೇಳೆ ಪ್ರತಿಕೃತಿ ಹೊತ್ತೋಯ್ದ ಪೊಲೀಸರು: ಪೊಲೀಸರು – ದಸಂಸ ಕಾರ್ಯಕರ್ತರ...

ಕೇಂದ್ರ, ರಾಜ್ಯ ಸರ್ಕಾರದ ಶವಯಾತ್ರೆ ವೇಳೆ ಪ್ರತಿಕೃತಿ ಹೊತ್ತೋಯ್ದ ಪೊಲೀಸರು: ಪೊಲೀಸರು – ದಸಂಸ ಕಾರ್ಯಕರ್ತರ ಜಟಾಪಟಿ

0

ಮಂಡ್ಯ:ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಶವಯಾತ್ರೆ ನಡೆಸಿದ ವೇಳೆ ಶವದ ಪ್ರತಿ ಕೃತಿಯನ್ನು ಪೊಲೀಸರು ಹೊತ್ತೊಯ್ದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದ ಘಟನೆ ಮಂಡ್ಯದಲ್ಲಿ ನಡೆದಿದೆ.


ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶವಯಾತ್ರೆ ನಡೆಸಿದ ಸಮಿತಿ ಕಾರ್ಯಕರ್ತರು ಧರಣಿ ನಿರತರಾಗಿದ್ದ ವೇಳೆ ಶವದ ಪ್ರತಿಕೃತಿಯನ್ನು ಪೊಲೀಸರು ಪ್ರತಿಭಟನಾಕಾರರ ಕಣ್ತಪ್ಪಿಸಿ ಹೊತ್ತೊಯ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಚೇರಿ ಇರುವ ಆವರಣದಲ್ಲಿ ಬಚ್ಚಿಟ್ಟರು.
ವಿಷಯ ಗೊತ್ತಾಗುತ್ತಿದ್ದಂತೆ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಜೊತೆ ಕಾರ್ಯಕರ್ತರು ಪೊಲೀಸರ ಬೆನ್ನಟ್ಟಿದರು,ಪೊಲೀಸರು ಮತ್ತು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯಿಂದ ಶಾಸಕರ ಕಚೇರಿಯತ್ತ ದೌಡಾಯಿಸಿದರು. ಪ್ರತಿಕೃತಿಯ ಹುಲ್ಲು ಮತ್ತು ಬೊಂಬುಗಳು ಪ್ರತಿಭಟನಾಕಾರರ ಕೈಗೆ ಸಿಕ್ಕಿದವು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಪೊಲೀಸರ ದೌರ್ಜನ್ಯದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶಿಸಿ ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದಲ್ಲಿ ಪ್ರತಿಕೃತಿಯ ಹುಲ್ಲು ಮತ್ತು ಬೊಂಬು ದಹಿಸಲು ಮುಂದಾದಾಗ ಪೊಲೀಸರು ತಡೆದು ಗೇಟಿನ ಹೊರಕ್ಕೆ ಕಳುಹಿಸಿದರು, ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿ ಗೇಟಿನ ಬಳಿ ದಹನಕ್ಕೆ ಮುಂದಾದರು,ಈ ವೇಳೆಯೂ ತಡೆಯಲು ಮುಂದಾದ ಪೊಲೀಸರ ಭದ್ರಕೋಟೆ ಭೇದಿಸಿ ಬೆಂಕಿ ಹಚ್ಚಿದರು,ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಜಟಾಪಟಿ ನಡೆಯಿತು,ಡಿವೈಎಸ್ ಪಿ ಶಿವಮೂರ್ತಿ ಮತ್ತು ಪೊಲೀಸ್ ಅಧಿಕಾರಿಗಳು ಬೆಂಕಿ ನಂದಿಸಲು ಸಾಕಷ್ಟು ಹರಸಾಹಸ ಪಟ್ಟರು.
ಆದರೆ ಪ್ರತಿಭಟನಾಕಾರರು ಸುತ್ತು ವರೆದ ಹಿನ್ನೆಲೆಯಲ್ಲಿ ನಂದಿಸಲು ಸಾಧ್ಯವಾಗಲಿಲ್ಲ. ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರಕ್ಕೆ ತೆರಳಿ ಪೊಲೀಸರ ದೌರ್ಜನ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತರುವಾಯ ಮನವಿ ಸಲ್ಲಿಸಿ ಪೊಲೀಸರ ವಿರುದ್ಧ ಕಿಡಿ ಕಾರುತ್ತ ಕದಸಂಸ ಕಾರ್ಯಕರ್ತರು ಚದುರಿದರು.

ಹಿಂದಿನ ಲೇಖನದೌರ್ಜನ್ಯ ನಡೆದು 120 ಕಳೆದರೂ  ಆರೋಪ ಪಟ್ಟಿ ಏಕೆ ದಾಖಲಾಗಿಲ್ಲ: ಖಾರವಾಗಿ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಹೊಟ್ಟೆ ನೋವು