ಮನೆ ಆರೋಗ್ಯ ಕೊರೊನಾ: ದೇಶದಲ್ಲಿ 2380 ಹೊಸ ಪ್ರಕರಣ

ಕೊರೊನಾ: ದೇಶದಲ್ಲಿ 2380 ಹೊಸ ಪ್ರಕರಣ

0

ನವದೆಹಲಿ(New Delhi): ಕಳೆದ 24 ಗಂಟೆಗಳಲ್ಲಿ ಹೊಸದಾಗಿ ಕೋವಿಡ್‌–19(Covid-19) ದೃಢಪಟ್ಟ 2,380 ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 13,433ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೋವಿಡ್‌ ಕಾಣಿಸಿಕೊಂಡಾಗಿನಿಂದ ಇದುವರೆಗೆ ಒಟ್ಟು 4,30,49,974 ಪ್ರಕರಣಗಳು ವರದಿಯಾಗಿವೆ. ಇಂದು  (ಗುರುವಾರ) ಬೆಳಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 56 ಸೋಂಕಿತರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಒಟ್ಟು 5,22,062ಕ್ಕೆ ತಲುಪಿದೆ.ಈವರೆಗೆ ವರದಿಯಾಗಿರುವ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 0.03 ರಷ್ಟಿದೆ. ಚೇತರಿಕೆ ಪ್ರಮಾಣ ಶೇ 98.76ರಷ್ಟಿದೆ.