ಮನೆ ರಾಜ್ಯ ಹಿಂದೂ ಧರ್ಮದ ವ್ಯಾಪಾರಿಗಳನ್ನು ಗುರಿಯಾಗಿಸಿ ಕಾರ್ಪೋರೇಟರ್ ರೇಷ್ಮಾ ಬಾನು ದಬ್ಬಾಳಿಕೆ: ಸೂಕ್ತ ಕ್ರಮಕ್ಕೆ ಆಗ್ರಹ

ಹಿಂದೂ ಧರ್ಮದ ವ್ಯಾಪಾರಿಗಳನ್ನು ಗುರಿಯಾಗಿಸಿ ಕಾರ್ಪೋರೇಟರ್ ರೇಷ್ಮಾ ಬಾನು ದಬ್ಬಾಳಿಕೆ: ಸೂಕ್ತ ಕ್ರಮಕ್ಕೆ ಆಗ್ರಹ

0

ಮೈಸೂರು(Mysuru): ನಗರದ 17ನೇ ವಾರ್ಡ್’ನ ಕಾರ್ಪೊರೇಟರ್ ರೇಷ್ಮಾಬಾನು ಅವರಿಗೆ ರಸ್ತೆ ಬದಿ ವ್ಯಾಪಾರ ಮಾಡುವ ಹಿಂದೂ ವ್ಯಾಪಾರಿಗಳು 10 ಸಾವಿರ ರೂ. ನೀಡದ್ದಕ್ಕೆ ವ್ಯಾಪಾರ ನಡೆಸುವ ಸ್ಥಳದಲ್ಲಿ ಮಣ್ಣು, ಕಸ ಹಾಕಿಸಿ ಕಿರುಕುಳ ನೀಡುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎ.ಎಚ್.ಪಿ.ರಾಷ್ಟ್ರೀಯ ಭಜರಂಗ ದಳ  ಒತ್ತಾಯಿಸಿದೆ.

ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಎ.ಎಚ್.ಪಿ.ರಾಷ್ಟ್ರೀಯ ಭಜರಂಗ ದಳದ ಜಿಲ್ಲಾಧ್ಯಕ್ಷ ಲೋಕೇಶ್ ಕೆ, ರೇಷ್ಮಾಬಾನು ಅವರಿಂದಾಗುತ್ತಿರುವ ತೊಂದರೆ ಬಗ್ಗೆ ತಿಳಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಹೈವೇ ವೃತ್ತದ ಬಳಿ ಪುತ್ಥಳಿ ಪಾರ್ಕ್ ಮುಂಭಾಗ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವ ಹಿಂದೂ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು  17ನೇ ವಾರ್ಡ್’ನ ಪಾಲಿಕೆ ಸದಸ್ಯೆ ರೇಷ್ಮಾ ಬಾನು ತಿಂಗಳಿಗೆ 10 ಸಾವಿರ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ. ಹಣ ಕೊಡದಿದ್ದಕ್ಕೆ ರಸ್ತೆಗೆ ಮಣ್ಣು ಹಾಕಿಸಿ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿರುವುದು ಮಾತ್ರವಲ್ಲದೇ ಸ್ವಚ್ಛ ನಗರಿ ಖ್ಯಾತಿಯ ಮೈಸೂರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಇವರು ಚುನಾಯಿತ ಪ್ರತಿನಿಧಿಯಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುವುದರಿಂದ ರೇಷ್ಮಾ ಬಾನು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲದೇ ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಪಾಲಿಕೆ ಸದಸ್ಯೆ ರೇಷ್ಮಾಬಾನು, ಅವರ ಸಂಗಡಿಗರಾದ ನಾಸೀರ್ ಮತ್ತು ಮುಬಾರಕ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹಿಂದಿನ ಲೇಖನಜಾಗತಿಕ ಆರ್ಥಿಕತೆಯಲ್ಲಿ ಭಾರತಕ್ಕೆ 5ನೇ ಸ್ಥಾನ: ಪಿ.ಜಿ.ಯೋಗೀಂದ್ರ
ಮುಂದಿನ ಲೇಖನಮೈಸೂರು: ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ಅವ್ಯವಹಾರ- ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ